ಕೇಂದ್ರ ಮಟ್ಟದ ಕ್ರೀಡಾಕೂಟ


ಮುನವಳ್ಳಿ,ಜು.22: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಮಾದರಿ ಶಾಲೆಯಲ್ಲಿ ಕೇಂದ್ರ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮ ಜರುಗಿದವು.
ಸಿ.ಆರ್.ಪಿ. ಮೀರಾ ಮಾಧವರಾವ್ ಮುರನಾಳ ಉದ್ಘಾಟಿಸಿ ಮಾತನಾಡಿ ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವದೊಂದಿಗೆ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಪಾಲ್ಗೊಳ್ಳುವುದರಿಂದ ನಾಯಕತ್ವ ಗುಣ ಬೆಳೆಯುತ್ತದೆ ಎಂದರು.
ಪುರಸಭೆ ಕಂದಾಯ ಅಧಿಕಾರಿ ಅನಿಲ ಗಿಡ್ನಂದಿ, ದಾನಿಗಳಾದ ಶ್ರೀಕಾಂತ ಡೋಂಗರೆ, ರಫೀಕ ಬೇಪಾರಿ, ಮಲ್ಲಿಕಾರ್ಜುನ ಕಮತಗಿ ಅವರನ್ನು ಸತ್ಕರಿಸಲಾಯಿತು.
ವೇದಿಕೆ ಮೇಲೆ ಪುರಸಭೆ ಸದಸ್ಯೆ ಶೀತಲ ಗೋಮಾಡಿ, ಪ್ರಗು ಬಿ.ಎಚ್.ಖೊಂದುನಾಯ್ಕ, ಎಚ್.ಜಿ.ನದಾಫ, ವೀರಣ್ಣ ಕೊಳಕಿ, ಎಂ.ಎಂ.ಲಕ್ಕಣ್ಣವರ, ವಿಜಯ ಮೊಹರೆ,
ಡಾ. ಎನ್.ಆರ್.ಚಲವಾದಿ, ವೈ.ಟಿ.ತಂಗೋಜಿ, ಪ್ರಕಾಶ ಶೀಲವಂತ, ಸುಜಾತಾ ಹೊನ್ನಳ್ಳಿ, ಸುಮಾ ಗೋಪಶೆಟ್ಟಿ, ಎಂ.ಎಸ್.ತಟವಟೆ, ಎನ್.ಎಂ.ಕುರಿ, ಕೆ.ಎಂ.ಕಕಮರಿ, ಭಾರತಿ ಹೋಟಿ, ಉಮಾದೇವಿ ಏಣಗಿಮಠ, ನಾಗರಾಜ ಕಿತ್ತೂರ, ಪಿ.ಎಸ್.ಕಮತಗಿ, ಆನಂದ ವಾಡೇಕರ, ಎಂ.ಎಸ್.ಮುಲ್ಲಾ, ಅಶ್ವಿನಿ ತೆಗ್ಗಿನಮನಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಪಾಲ್ಗೊಂಡಿದ್ದರು.