ಕೇಂದ್ರ ಬಿಜೆಪಿ ಸರಕಾರದ ದ್ವೇಷ ರಾಜಕಾರಣ ಖಂಡಿಸಿ ಪ್ರತಿಭಟನೆ

ವಿಜಯಪುರ:ಜೂ.21: ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಜನವಿರೋಧಿ, ದ್ವೇಷ ರಾಜಕೀಯ, ಮಲತಾಯಿ ಧೋರಣೆಯನ್ನು ಖಂಡಿಸಿ ವಿಜಯಪುರ ನಗರದ ಡಾ.ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ಮಾಡಲಾಯಿತು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದ ಜನತೆಗೆ 5 ಜನಪರ ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಹೇಳಿತ್ತು. ಅದರಲ್ಲಿ ಅನ್ನಭಾಗ್ಯ ಯೋಜನೆಯೂ ಒಂದು. ರಾಜ್ಯ ಹಸಿವು ಮುಕ್ತವಾಗಬೇಕೆಂಬ ಒಳ್ಳೆಯ ಉದ್ದೇಶದಿಂದ ಬಡವರಿಗೆ ತಲಾ 10 ಕೆಜಿ ಅಕ್ಕಿ ಉಚಿತವಾಗಿ ನೀಡಬೇಕೆಂದು ಸಂಕಲ್ಪ ಮಾಡಿದಂತೆ ಯೋಜನೆಯನ್ನು ಜಾರಿಗೆ ತರಲು ಹೊರಟ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಕೇಂದ್ರ ಸರಕಾರದಿಂದ ನಿರೀಕ್ಷೆಯಂತೆ ಅಕ್ಕಿ ಪಡೆಯಲು ಕೇಂದ್ರ ಆಹಾರ ಇಲಾಖೆಯಿಂದ ಭರವಸೆಯ ಪತ್ರವನ್ನು ಪಡೆದಿತ್ತು. ಆದರೆ ಕೇಂದ್ರ ಬಿಜೆಪಿ ಸರಕಾರವು ಇದಕ್ಕೆ ಅಡ್ಡಗಾಲು ಹಾಕಿತು. ಕೊಟ್ಟ ಭರವಸೆಯನ್ನು ಒಂದೇ ದಿನದಲ್ಲಿ ಹಿಂಪಡೆದು ದ್ವೇಷ ರಾಜಕಾರಣ ಶುರು ಮಾಡಿತು. ಕರ್ನಾಟಕ ರಾಜ್ಯದಲ್ಲಿ ಹೀನಾಯ ಸೋಲು ಕಂಡು ಕಂಗಾಲಾದ ಬಿಜೆಪಿ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವು ತಮ್ಮ ಪಕ್ಷಕ್ಕೆ ಮುಳುವಾಗುತ್ತೆ ಅಂತಾ ಭಾವಿಸಿ ಜನಪರ ಯೋಜನೆಗಳಿಗೆ ಅಡತಡೆ ಉಂಟುಮಾಡಲು ಪ್ರಾರಂಭಿಸಿದ್ದನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್, ಜಿಲ್ಲಾ ಉಪಾಧ್ಯಕ್ಷರಾದ ವೈಜನಾಥ ಕರ್ಪೂರಮಠ, ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ, ಪ್ರಚಾರ ಸಮಿತಿ ಸಂಚಾಲಕ ಸಂಗಮೇಶ ಬಬಲೇಶ್ವರ, ಪಿಸಿಸಿ ಸದಸ್ಯ ಬಿ.ಎಸ್. ಪಾಟೀಲ (ಯಾಳಗಿ), ಎಸ್.ಸಿ. ಘಟಕದ ಜಿಲ್ಲಾ ಅಧ್ಯಕ್ಷ ರಮೇಶ ಗುಬ್ಬೇವಾಡ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷೆ ಮಹಾದೇವಿ ಗೋಕಾಕ, ಕೆಪಿಸಿಸಿ ವೈದ್ಯಕೀಯ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ.ರವಿ ಬಿರಾದಾರ, ಜಿಲ್ಲಾ ಹಿಂದುಳಿದ ವರ್ಗಗಳ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಬ್ಬೀರ ಜಾಗೀರದಾರ, ಎನ್‍ಎಸ್‍ಯುಐ ಜಿಲ್ಲಾ ಅಧ್ಯಕ್ಷ ಅಮಿತ ಚವ್ಹಾಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐ.ಎಂ. ಇಂಡಿಕರ ಮುಂತಾದವರು ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಡಾ.ಗಂಗಾಧರ ಸಂಬಣ್ಣಿ, ಆಜಾದ ಪಟೇಲ, ಬ್ಲಾಕ್ ಅಧ್ಯಕ್ಷರುಗಳಾದ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಸುರೇಶ ಹಾರಿವಾಳ, ಗುರು ತಾರನಾಳ, ರಫೀಕ ಪಕಾಲೆ, ಸಿದ್ದು ಗೌಡನ್ನವರ, ರಾಮಚಂದ್ರ ಹಕ್ಕೆ, ಅಂಗ ಘಟಕಗಳ ಅಧ್ಯಕ್ಷರಾದ ಮಹ್ಮದಹನೀಫ ಮಕಾನದಾರ, ಪಯಾಜ ಕಲಾದಗಿ, ನಿಂಗಪ್ಪ ಸಂಗಾಪೂರ, ಆನಂದ ಜಾಧವ, ಎಂ.ಬಿ. ಮಂಡೆಗಾರ, ಲಾಲಸಾಬ ಕೊರಬು, ರಾಜೇಶ್ವರಿ ಚೋಳಕೆ, ಜಯಶ್ರೀ ಭಾರತೆ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ವಸಂತ ಹೊನಮೊಡೆ, ಎಂ.ಜಿ. ಯಂಕಂಚಿ, ಭೀಮಾಶಂಕರ ಸಿ. ಸಾವುಕಾರ, ಅಪ್ತಾಬಖಾದ್ರಿ ಇನಾಮದಾರ, ಚನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ಶರಣಪ್ಪ ಯಕ್ಕುಂಡಿ, ಅಷ್ಫಾಕ ಮನಗೂಳಿ, ಮಲ್ಲಿಕಾರ್ಜುನ ಪರಸಣ್ಣವರ, ಮಹಾನಗರಪಾಲಿಕೆ ಸದಸ್ಯರಾದ ಅಬ್ದುಲ್‍ರಜಾಕ ಹೊರ್ತಿ, ಜಮೀರಅಹ್ಮದ ಬಾಂಗಿ, ದಿನೇಶ ಹಳ್ಳಿ, ಅಪ್ಪು ಪೂಜಾರಿ, ಶಬ್ಬೀರ ಮನಗೂಳಿ, ಆಸೀಫ್ ಶಾನವಾಲೆ, ಬಂದೇನವಾಜ ಬೀಳಗಿ, ಇದ್ರೂಸ್ ಬಕ್ಷಿ, ಮಿಲಿಂದ ಚಂಚಲಕರ, ಇಲಿಯಾಸ ಸಿದ್ದಿಕಿ, ಮೈನುದ್ದೀನ ಬೀಳಗಿ, ಸಂತೋಷ ಚವ್ಹಾಣ, ಶಬ್ಬೀರ ಪಾಟೀಲ, ಮಹಿಳಾ ಪದಾಧಿಕಾರಿಗಳಾದ ಗಂಗೂಬಾಯಿ ಧುಮಾಳೆ, ಆಸ್ಮಾ ಕಾಲೇಬಾಗ, ಸುಜಾತಾ ಶಿಂದೆ, ಜಯಶ್ರೀ ಹದನೂರ, ಅಂಬಿಕಾ ಪಾಟೀಲ, ಮಹಾನಂದಾ ಬಮ್ಮಣ್ಣಿ, ಅಕ್ರಮ ಮಾಶಾಳಕರ, ಧನರಾಜ ಎ., ಕೆ.ಎಸ್. ಪಾರಶೆಟ್ಟಿ, ಹಾಜಿ ಪಿಂಜಾರ, ಪರಶುರಾಮ ಹೊಸಮನಿ, ಸಂತೋಷ ಬಾಲಗಾಂವಿ, ಸತೀಶ ಅಡವಿ, ಸತೀಶ ದೊಡಮನಿ, ಬಾಬುಸಾಬ ಯಾಳವಾರ, ಮಾದೇವ ಜಾಧವ, ನಾಗೇಶ ತಾಳಿಕೋಟಿ, ಪರಶುರಾಮ ಜಮಖಂಡಿ, ಬದ್ರು ಮಣೂರ, ಕಾಶಿನಾಥ ರಾಠೋಡ, ಗವಿಮಠ, ಈರಪ್ಪ ಕುಂಬಾರ, ಸಂತೋಷ ಕಾಂಬಳೆ, ಶಾಕೀರ ಖಾಜಿ ಮುಂತಾದವರು ಉಪಸ್ಥಿತರಿದ್ದ