
ಅಫಜಲಪುರ: ಆ.15:ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ಸಿಪಿಐ ಪಂಡಿತ್ ಸಗರ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸಾರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಮಾತನಾಡಿ, ಬಸ್ ನಿಲ್ದಾಣದಲ್ಲಿನ ಎಲ್ಲಾ ಸಿಸಿ ಕ್ಯಾಮರಾಗಳು ದಿನದ 24 ಗಂಟೆಯೂ ಕೂಡ ಕಾರ್ಯನಿರ್ವಹಿಸಬೇಕು. ಮತ್ತು ಅಗತ್ಯ ಬಿದ್ದಾಗ ಅದರ ಡೇಟಾಗಳು ತುರ್ತು ಸಂದರ್ಭದಲ್ಲಿ ವಿಡಿಯೋ ಮಾಹಿತಿ ಸಿಗುವಂತೆ ಡಿವಿಆರ್ ಮಷಿನ್ ನಲ್ಲಿ ಸಂಗ್ರಹವಾಗಬೇಕು. ಇದರಿಂದ ಕಳ್ಳತನ ಪ್ರಕರಣ ಹಾಗೂ ಪುಂಡಪೆÇೀಕರಿಗಳ ಹಾವಳಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಅಲ್ಲದೆ ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನ ಸವಾರರು ಬೈಕ್ ನಿಲ್ಲಿಸದಂತೆ ನೋಡಿಕೊಳ್ಳಬೇಕು ಹಾಗೂ ಪೆÇಲೀಸ್ ಠಾಣೆಯ ವತಿಯಿಂದ ಬಸ್ ನಿಲ್ದಾಣದಲ್ಲಿ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡುವುದಾಗಿ ತಿಳಿಸಿದ ಅವರು ಪ್ರತಿದಿನ ಬಿಡುವಿನ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ರೌಂಡ್ ಹಾಕುವಂತೆ ಪಿ.ಎಸ್.ಐ ಮಡಿವಾಳಪ್ಪ ಬಾಗೋಡಿ ಅವರಿಗೆ ಸೂಚಿಸಿದರು.