ಕೇಂದ್ರ ಬಜೆಟ್ ನಿಂದ ಜನ ಸಾಮಾನ್ಯರಿಗೆ ಹೊರೆ

ಕಲಬುರಗಿ:ಫೆ.2: ಕೇಂದ್ರ ಸರಕಾರವು ಮಂಡಿಸಿರುವ ಬಜೆಟ ನಿರಾಶದಾಯಕ ಬಜೆಟ್ ಎಂದು ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಓಂಕಾರ ವಠಾರ ಅವರು ಹೇಳಿದರು. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು ಸಾಮಾನ್ಯ ಜನರ ಮೇಲೆ ಹೊರೆ ಆಗುವಂತ ಬಜೆಟ್ ಇದಾಗಿದೆ ಎಂದು ಟೀಕಿಸಿದರು.
ಕೇಂದ್ರ ಬಿಜೆಪಿ ಸರಕಾರದ ಮಧ್ಯಂತರ ಬಜೆಟ್ ಅಕ್ಷರ ಸಹ ಕನ್ನಡಲಿಯ ಗಂಟು ಅದು ಕಾರ್ಯಗತವಾಗುವುದು ದುಸ್ತರ.ಬಣ್ಣದ ತಗಡಿನ ತುತ್ತೂರಿ ಅನ್ನದೇ ವಿಧಿ ಇಲ್ಲ.ತೆರಿಗೆ ಕಟ್ಟುವ ಶಿಕ್ಷಕರಿಗೆ,ನೌಕರಿಗೆ ವಿಶೇಷವಾಗಿ ಮಧ್ಯಮ ವರ್ಗಕ್ಕೆ ತೀವ್ರ ನಿರಾಸೆ ತಂದ ಬಜೆಟ ಇದಾಗಿದೆ.ಅಲ್ಲದೇ ಕರ್ನಾಟಕ ರಾಜ್ಯ ಹೆಚ್ಚಿನ ತೆರಿಗೆ ಸಂದಾಯ ಮಾಡಿದರೂ ಯಾವುದೇ ಯೋಜನೆಯ ಘೋಷಣೆ ಮಾಡಿಲ್ಲ ಎಂದು ಅವರು ಹೇಳಿದರು.