ಕೇಂದ್ರ ನಾಯಕರ ಅಪೇಕ್ಷೆಯಂತೆ ಸಚಿವ ಸಂಪುಟ ವಿಸ್ತರಣೆ

ದಾವಣಗೆರೆ.ಜ.೧೪; ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ.ಕೇಂದ್ರ ನಾಯಕರ ಅಪೇಕ್ಷೆಯಂತೆ ಒಂದು ಸಚಿವ ಸ್ಥಾನ ಉಳಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆಯುತ್ತಿರುವ ಹರ ಜಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಜಿಎಂಐಟಿ ಕಾಲೇಜಿನ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲ ಶಾಸಕರು ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡಿರುವುದು ಗೊತ್ತಾಗಿದೆಕೇಂದ್ರ ನಾಯಕರ ಸಲಹೆಯಂತೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದೆ. ಆದರೆ ನನ್ನ ಮೇಲೆ ಕೆಲವರು ಆರೋಪ ಮಾಡುತ್ತಿದ್ದಾರೆ.ಅಷ್ಟೇ ಅಲ್ಲ ಆರೋಪ ಮಾಡುವ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ.ಅಸಮಾಧಾನಗೊಂಡ ಶಾಸಕರು ಶಿಸ್ತು ಉಲ್ಲಂಘನೆ ಮಾಡಬಾರದು. ಕೇಂದ್ರ ನಾಯಕರ ಜೊತೆ ಚರ್ಚೆ ಮಾಡಲಿ ಅಭ್ಯಂತರವಿಲ್ಲ ಕೇಂದ್ರ ನಾಯಕರ ಆಶೀರ್ವಾದದಿಂದ ಅಭಿವೃದ್ಧಿ ಕಡೆ ಗಮನಕೊಡುವೆ.ತಿಂಗಳಾಂತ್ಯದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯಲಿದೆ.ಮಾರ್ಚಲ್ಲಿ ಬಜೆಟ್ ಅಧಿವೇಶನ ಮಾಡುತ್ತೇವೆ ನನ್ನ ಇತಿಮಿತಿಯೊಳಗೆ ರೈತ ಪರ ಬಜೆಟ್ ಮಂಡಿಸುವೆ ಉಳಿದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಬಗ್ಗೆ ಗಮನ ಹರಿಸುವೆ ಎಂದರು.ಈ ವೇಳೆ ಸಂಸದ ಜಿ.ಎಂ ಸಿದ್ದೇಶ್ವರ್,ಜಿಲ್ಲಾ ಸಚಿವ ಭೈರತಿ ಬಸವರಾಜ್, ಶಾಸಕ ಎಸ್.ಎ ರವೀಂದ್ರನಾಥ್ ಇತರರಿದ್ದರು.