ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೋನಾ

ನವದೆಹಲಿ.ಆ.2- ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಕೊರೊನಾ ಸೋಂಕು ತಗುಲಿದೆ.

ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಪರೀಕ್ಷೆ ಮಾಡಿಸಲಾಗಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಈ ಸಂಬಂಧ ಟ್ವೀಟ್‌ ಮಾಹಿತಿ ಹಂಚಿಕೊಂಡಿದ್ದಾರೆಸದ್ಯ ಆರೋಗ್ಯವಾಗಿದ್ದೇವೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆ ದಾಖಲಾಗುತ್ತಿದ್ದೇನೆ. ತಮ್ಮ ಸಂಪರ್ಕ ಬಂದವರು ಐಸೂಲೇಷನ್ ಆಗುವಂತೆ ಅಮಿತ್ ಶಾ ಟ್ವಿಟ್ಟರ್‌ನಲ್ಲಿ ಮನವಿ ಮಾಡಿದ್ದಾರೆ.

ಶೇ.65.44 ಚೇತರಿಕೆ:

ದೇಶದಲ್ಲಿ ಕೊರೊನಾ ಸೋಂಕಿತರ ಪೈಕಿ ದೇಶದಲ್ಲಿ ಒಟ್ಟು 11,45,629 ಮಂದಿ ಬಿಡುಗಡೆಯಾಗಿದ್ದಾರೆ. ಇದಿವರೆಗೂ ಸೋಂಕಿನಿಂದ ಚೇತರಿಸಿಕೊಂಡವರ ಪ್ರಮಾಣ ಶೇ.65.44 ಏರಿಕೆಯಾಗಿದೆ.ಸದ್ಯ ದೇಶದಲ್ಲಿ 5,67,730 ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ ಶೇ.33.43 ರಷ್ಟಿದೆ.‌ಇದುವೆಗೂ ಶೇ.2.13 ರಷ್ಟು ಅಂದರೆ 37,364 ಮಂದಿ ಮೃತಪಟ್ಟಿದ್ದಾರೆ.

ಸರ್ಕಾರದ ವರದಿ ಪ್ರಕಾರ ಜೂನ್‌ 18ಕ್ಕೆ ಶೇ.3.33 ರಷ್ಟಿದ್ದರೆ ಜುಲೈ 10ಕ್ಕೆ ಶೇ.2.72ಕ್ಕೆ ಇಳಿಕೆಯಾಗಿತ್ತು. ಆಗಸ್ಟ್‌ 1 ರಂದು ಶೇ.2.15ರಷ್ಟಿದ್ದರೆ ಆಗಸ್ಟ್‌ 2 ರಂದು ಶೇ.2.13ರಕ್ಕೆ ಮರಣ ಪ್ರಮಾಣ ಇಳಿಕೆಯಾಗಿದೆ ಎಂದು ತಿಳಿಸಲಾಗಿದೆ