
ಕಲಬುರಗಿ,ಏ.12-ಇಲ್ಲಿನ ಕೇಂದ್ರ ಕಾರಾಗೃಹ( ಜೈಲು)ದ ಮೇಲೆ ಇಂದು ಬೆಳಗಿನ ಜಾವ ನಗರ ಪೆÇಲೀಸ್ ಉಪ ಆಯುಕ್ತರ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಲಾಗಿದೆ.
ಪೆÇಲೀಸ್ ಆಯುಕ್ತ ಆರ್ ಚೇತನ್ ಅವರ ಮಾರ್ಗದರ್ಶನದಲ್ಲಿ ಉಪ ಪೆÇಲೀಸ್ ಆಯುಕ್ತ ಅಡ್ಡೂರು ಶ್ರೀನಿವಾಸಲು ನೇತೃತ್ವದ ತಂಡÀ ದಾಳಿ ನಡೆಸಿ ವ್ಯಾಪಕ ಶೋಧ ನಡೆಸಿದೆ.
ಬೆಳಗಿನ ಜಾವ 5.30ರ ಸುಮಾರಿಗೆ 120 ಪೆÇಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡ ತಂಡ ದಾಳಿ ನಡೆಸಿ ಎರಡು ಗಂಟೆಗಳ ಕಾಲ ವ್ಯಾಪಕ ಶೋಧ ನಡೆಸಿದೆ.
ಚುನಾವಣೆ ಹಿನ್ನೆಲೆಯಲ್ಲಿ ಜೈಲಿನಿಂದ ಕೈದಿಗಳು ಮೊಬೈಲ್ ಕರೆ ಮಾಡಿ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಈ ದಾಳಿ ಮಹತ್ವ ಪಡೆದುಕೊಂಡಿದೆ.
ದಾಳಿಯಲ್ಲಿ ಕಾರಾಗೃವನ್ನು ಸಂಪೂರ್ಣವಾಗಿ ಶೋಧಿಸಲಾಗಿದೆಯಲ್ಲದೇ ಪ್ರತಿಯೊಬ್ಬ ಕೈದಿಯನ್ನು ಸೂಕ್ಷ್ಮವಾಗಿ ತಪಾಸಣೆಗೆ ಒಳಪಡಿಸಲಾಗಿದೆ. ಪ್ರಮುಖವಾಗಿ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ.
ದಾಳಿಯಲ್ಲಿ ಏನೇನು ಪತ್ತೆ ಯಾಗಿದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ಬಹಿರಂಗ ಪಡಿಸಿಲ.್ಲ ದಾಳಿ ನಂತರ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ರಂಗನಾಥ್ ಕಾರಾಗೃಹಕ್ಕೆ ಆಗಮಿಸಿ ಮಾಹಿತಿ ನೀಡಿದರು.