ಕೇಂದ್ರ ಕಾರಾಗೃಹ ಕಾಮಗಾರಿ ನಿಧಾನಗತಿ ಸಹಿಸಲ್ಲ ಶೀಘ್ರ ಕಾಮಗಾರಿ ಪೂರ್ಣಗೊಳಿಸಿ: ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ

ಬೀದರ:ಜೂ.5:ಕೇಂದ್ರ ಕಾರಾಗೃಹ ನಿರ್ಮಾಣ ಕಾರ್ಯವು ನಿಧಾನಗತಿಯಲ್ಲಿ ಸಾಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಕಾಣುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಶಾಸಕರಾದ ಡಾ.ಶೈಲೇಂದ್ರ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೀದರ್ ತಾಲೂಕಿನ ಕೊಳಾರ (ಬಿ) ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಅತಿದೊಡ್ಡ ಕೇಂದ್ರ ಕಾರಾಗೃಹ ನಿರ್ಮಾಣ ಕಾರ್ಯವನ್ನು ವಿಕ್ಷಣೆ ನಡೆಸಿ ಕಾಮಗಾರಿ ಪರಿಶೀಲನೆ ನಡೆಸಿ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ನಮ್ಮ ದಕ್ಷಿಣ ಕ್ಷೇತ್ರದಲ್ಲಿ ಕೇಂದ್ರ ಕಾರಾಗೃಹ ಹಲವು ದಿನಗಳಿಂದ ನಿರ್ಮಾಣ ಹಂತದಲ್ಲೆ ಇದೆ ಕಾಮಗಾರಿ ಮುಗಿಯೋದು ಯಾವಾಗ ಎಂದು ಹಲವರು ಪ್ರಶ್ನೆ ಮಾಡುವಂತಾಗಿದೆ ಹೀಗಾಗಿ ಕಾಮಗಾರಿ ಅತಿ ಶೀಘ್ರದಲ್ಲಿ ಮೂಗಿಯಬೇಕು.
ಕಾರಾಗೃಹ ಕಟ್ಟಡ ನಿರ್ಮಾಣದಲ್ಲಿ ಉತ್ತಮ ಗುಣಮಟ್ಟದ ಕೆಲಸ ವಾಗಬೇಕು ಕಟ್ಟಡ ನಿರ್ಮಾಣ ಹಂತದಲ್ಲೆ ಎಲ್ಲ ರೀತಿಯ ಯೋಜನೆಗಳನ್ನು ರೂಪಿಸಿಕೊಂಡು ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಬೇಕು ಯಾವುದೇ ಕಾರಣಕ್ಕೂ ಬೇಜವಾಬ್ದಾರಿತನ ಕಂಡುಬಂದರೆ ಸಹಿಸಲ್ಲ ಎಂದರು.

ಕಾರಾಗೃಹÀಕ್ಕೆ ಸಂಪರ್ಕಿಸುವ ರಸ್ತೆ ಸಹ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿ ಮೂಗಿಯಬೇಕು ಮಳೆಗಾಲದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ ರಸ್ತೆ ಕೆಲಸ ಉತ್ತಮವಾಗಿರಬೇಕು, ಮತ್ತು ಪ್ರಗತಿಯಲ್ಲಿರುವ ಕಾಮಗಾರಿಯಲ್ಲಿ ಯಾವುದೇ ರೀತಿಯ ನಿಷ್ಕಾಳಜಿ ಸಹಿಸಲ್ಲ ಎಂದರು.

ಕೇಂದ್ರ ಕಾರಾಗೃಹದಲ್ಲಿ ಒಟ್ಟು 1000 ಖೈದಿಗಳನ್ನು ಇರಿಸಲು ಯೋಜನೆಯಲ್ಲಿದೆ. ಕಾರಾಗೃಹ ದಲ್ಲಿ ಖೈದಿಗಳ ಬಂದಿಖಾನೆ, ಅಡುಗೆ ಕೋಣೆ, ಖೈದಿಗಳ ಸಂಬಂಧಿಕರು ಭೇಟಿ ಮಾಡಲು ಕೋಣೆ, ಸಂಗೀತ ಕೋಣೆ, ಎರಡು ನಿಗ್ರಹ ಟವರ್, ಉತ್ತಮ ಗುಣಮಟ್ಟದ ಕಪೌಂಡ ವಾಲ್, ಶೌಚಾಲಯ, ಸ್ನಾನದ ಕೋಣೆ, ಧ್ಯಾನದ ಕೋಣೆ ಇನ್ನಿತರ ಅನೇಕ ಕೋಣೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೆಎಸ್ ಪಿಎಚ್ ಎಸ್ ಐಡಿಸಿಎಲ್ ಇಇ ಶ್ರೀದೇವಿ ಪಾಟೀಲ್ ಮಾಹಿತಿ ನೀಡಿದರು.

ಕಾರಾಗೃಹ ದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಕ್ವಾಟರ್ಸ ವ್ಯವಸ್ಥೆ ಮಾಡಬೇಕು ನನ್ನಿಂದ ಯಾವುದೆ ಸಹಾಯ ಬೇಕಾದಲ್ಲಿ ಸಂಪರ್ಕಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರಾಗೃಹ ದ ಅಧೀಕ್ಷಕರಾದ ಶರಣ ಬಸಪ್ಪ, ಎಇಇ ಅಹ್ಮದ್ ಮತ್ತು ಮುಖಂಡರಾದ ಓಂಪ್ರಕಾಶ್ ಮಜಗೆ, ವಿಜಯಕುಮಾರ ಪಾಟೀಲ, ನಾರಾಯಣ ರೆಡ್ಡಿ ಮಂಗಲಗಿ, ಸುರೇಶ ಮಾಶೆಟ್ಟಿ, ಸಂಜುಕುಮಾರ ರೆಡ್ಡಿಥರಥರೆ, ಜಗನ್ನಾಥ ಪಾಟೀಲ, ರೇವಣಪ್ಪ ಚಿಲ್ಲರ್ಗಿ, ಗಣಪತಿ, ರಾಜಶೇಖರ ನೌಬಾದೆ, ವಿಜಯಕುಮಾರ ಸ್ವಾಮಿ ಸಂತೋಷ ರೆಡ್ಡಿ ಆಣದೂರ ಮತ್ತಿತರರು ಉಪಸ್ಥಿತರಿದ್ದರು.