ಕೇಂದ್ರ ಕಾರಾಗೃಹದಲ್ಲಿ 65ನೇ ಕನ್ನಡ ರಾಜ್ಯೋತ್ಸವ ಆಚರಣೆ

ಕಲಬುರಗಿ,ನ.1-ಕೇಂದ್ರ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಬಂಧಿಗಳೊಂದಿಗೆ 65ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು.
ಕೇಂದ್ರ ಕಾರಾಗೃಹದ ಪ್ರಭಾರಿ ಅಧೀಕ್ಷ ವಿ. ಕೃಷ್ಣಮೂರ್ತಿ ಅವರು ತಾಯಿ ಭುವನೇಶ್ವರಿ ದೇವಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಧ್ವಜಾರೋಹಣ ನೆರವೆರಿಸಿ ಮಾತನಾಡಿದರು.
ಕನ್ನಡವನ್ನು ಉಳಿಸಿ, ಬಳಸಿ, ಬೆಳೆಸಿದಾಗ ಮಾತ್ರ ನಿಜವಾದ ಅರ್ಥದಲ್ಲಿ ಕನ್ನಡಾಂಬೆಯನ್ನು ಪೂಜಿಸಿದಂತಾಗುತ್ತದೆ ಹಾಗೂ ಕನ್ನಡ ಭಾಷೆಯ ಜೊತೆಗೆ ಇತರೆ ಭಾಷೆಗಳನ್ನು ಮಾತನಾಡುತ್ತಾ, ನಮ್ಮ ಭಾಷೆಗೆ ಹೆಚ್ಚಿನ ಒತ್ತು ಕೊಟ್ಟು, ಆಡಳಿತದಲ್ಲಿ ಕನ್ನಡವನ್ನು ಪಾರದರ್ಶಕವಾಗಿ ಬಳಕೆಗೆ ತರಬೇಕೆಂದು ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ನಾಗರಾಜ್ ಮುಲಗೆ ನೆರವೆರಿಸಿದರು. ಬಂಧಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಅತಿಥಿಗಳಾಗಿ ಕಾರಾಗೃಹದ ವೈದ್ಯಾಧಿಕಾರಿ ಡಾ. ಅಣ್ಣಾರಾವ ಪಾಟೀಲ್, ಜೈಲರ್ ಗಳಾದ ಸೈನಾಜೆ ಎಂ. ನಿಗೇವಾನ್, ಗೋಪಾಲಕೃಷ್ಣ ಕುಲಕರ್ಣಿ, ಅರ್ಜುನ ಸಿಂಗ್ ಚವ್ಹಾಣ ಹಾಗೂ ಸಿಬ್ಬಂದಿವರ್ಗದವರು ಭಾಗವಹಿಸಿದ್ದರು.