ಕೇಂದ್ರ ಕಾರಾಗೃಹದಲ್ಲಿ ಸಂತ ಕನಕದಾಸ-ವೀರವನಿತೆ ಓಬವ್ವ ಜಯಂತಿ ಆಚರಣೆ

ವಿಜಯಪುರ:ನ.13: ಕಾರಾಗೃಹ ಮತ್ತು ಸುಧಾರಣಾ ಸೇವೆ ಕೇಂದ್ರ ಕಾರಾಗೃಹ ವಿಜಯಪುರದಲ್ಲಿ “ದಾಸ ಶ್ರೇಷ್ಠ ಕನಕದಾಸ ಹಾಗೂ ವೀರವನಿತೆ ಓಬವ್ವ ಜಯಂತಿ”À ಕಾರ್ಯಕ್ರಮವನ್ನು ಶುಕ್ರವಾರ ಆಚರಿಸಲಾಯಿತು.
ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಮಂಜುನಾಥ ಹೆಚ್.ಜಿ ರವರು ಮಾತನಾಡಿ, 15ನೇ ಶತಮಾನ ಕಂಡ ದಾಸಶ್ರೇಷ್ಠರು ತಿಮ್ಮಪ್ಪನಾಯಕರಾಗಿ ಕರ್ನಾಟಕದ ಹಾವೇರಿ ಜಿಲ್ಲೇಯ ಶಿಗ್ಗಾಂವ ತಾಲೂಕ ಬಾಡ ಗ್ರಾಮದಲ್ಲಿ ಹುಟ್ಟಿ ಕನಕದಾಸರಾಗಿ ಪ್ರಸಿದ್ದಿಯನ್ನು ಪಡೆದರು ಹಾಗೂ ವೀರವನಿತೆ ಓಬವ್ವ ಅವರು ಚಿತ್ರದುರ್ಗದ ಕಲ್ಲಿನ ಕೋಟೆಯಲ್ಲಿ ಎದುರಾಳಿಗಳ ಜೋತೆ ಹೋರಾಡಿದ ಸನ್ನಿವೇಶವನ್ನು ಸ್ತಾಪಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧೀಕ್ಷಕ ಡಾ|| ಐ.ಜೆ.ಮ್ಯಾಗೇರಿ ಅವರು ಮಾತನಾಡಿ, ಸಂತ, ತತ್ವಜ್ಞಾನಿ, ಕವಿ ಸಂಗೀತಗಾರ ಶ್ರೀ ಕನಕದಾಸರು ದಂಡನಾಯಕರಾಗಿದ್ದವರು ಯುದ್ಧದಲ್ಲಿ ಸೋತು ವಿರಾಗಿಯಾದರು. ಇವರು ಮೋಹನ ತರಂಗಿಣಿ, ನಳ ಚರಿತ್ರೆ, ರಾಮಧ್ಯಾನ ಚರಿತ, ಹರಿಭಕ್ತಿಸಾರ ಎನ್ನುವ ಮಹಾನ್ ಕೃತಿಗಳನ್ನು ಸಮಾಜಕ್ಕೆ ನೀಡಿದರು. ಹಾಗೂ ವೀರವನಿತೆ ಓಬವ್ವ ಅವರÀ ಹೋರಾಟದ ಕುರಿತು ನೆನಪಿಸಿದರು ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯೋಣ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರಾಗೃಹದ ಆಡಳಿತಾಧಿಕಾರಿ ರವಿ ಲಮಾಣಿ, ಕಚೇರಿ ಅಧೀಕ್ಷಕ ಧಾವಜಿ ರಾಠೋಡ, ಜೈಲರುಗಳಾದ ಶ್ರೀಮತಿ ತಿಲೋತ್ತಮೆ, ಜಿ.ಕೆ.ಕುಲಕರ್ಣಿ, ಐ.ಎಸ್. ಹಿರೇಮಠ ಎ.ಕೆ.ಅನ್ಸಾರಿ, ಶಿಕ್ಷಕ ಡಿ.ಎಸ್.ದೀಕ್ಷಿತ್ ಸೇರಿದಂತೆ ಕಾರಾಗೃಹದ ಸಿಬ್ಬಂದಿ, ಬಂದಿಗಳು ಭಾಗವಹಿಸಿದ್ದರು. ಲವಕುಮಾರ ಮನಗೂಳಿ ಅವರು ನಿರೂಪಿಸಿದರು, ಶೀತಲ ಕೌಲಗಿ ಸ್ವಾಗತಿಸಿದರು, ಬಸವರಾಜ ಹೊಟಗಾರ ವಂದಿಸಿದರು.