ಕೇಂದ್ರ ಅಂಚೆ ಕಚೇರಿಯ ದ್ವಾರದಲ್ಲಿ ಲಾಟಿ ಹಿಡಿದು ಸೇವೆ: ಹಾಸಿಂಪೀರ ವಾಲೀಕಾರ ಖಂಡನೆ

ವಿಜಯಪುರ, ಮೇ.21-ನಗರದ ಕೇಂದ್ರ ಅಂಚೆ ಕಚೇರಿಯ ದ್ವಾರದಲ್ಲಿ ಇದೇ ಇಲಾಖೆಯ ಸಿಬ್ಬಂದಿಯು ಕೈಯಲ್ಲಿ ಲಾಟಿ ಹಿಡಿದು ಸೇವೆ ಮಾಡುತ್ತಿರುವದನ್ನು ಮಾನವ ಹಕ್ಕುಗಳ ಕಲ್ಯಾಣ ಮಂಡಳಿಯ ರಾಜ್ಯಾಧ್ಯಕ್ಷ ಹಾಸಿಂಪೀರ ವಾಲೀಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ
ಗೌರವಯುತ ಸಾರ್ವಜನಿಕರು ಅಂಚೆ ಇಲಾಖೆಗೆ ತಮ್ಮ ವ್ಯವಹಾರಕ್ಕಾಗಿ ಆಗಮಿಸುತ್ತಾರೆ. ಗ್ರಾಹಕರು ಅಂಚೆ ಇಲಾಖೆಯನ್ನೂ ಅತ್ಯಂತ ವಿಶ್ವಸನೀಯ ಸಂಸ್ಥೆಯಂದು ನಂಬಿದ್ದಾರೆ. ಆದರೆ ಕಚೇರಿಯ ಬಾಗಿಲಲ್ಲಿ ದೊಡ್ಡದಾದ ಲಾಠಿ (ಬೆತ್ತ) ಹಿಡಿದುಕೊಂಡು ನಿಂತುಕೊಂಡಿದ್ದರಿಂದ ಮುಗ್ಧ ಗ್ರಾಹಕರು ಭಯಭೀತರಾಗಿದ್ದಾರೆ. ಈ ಇಲಾಖೆಗೆ ಸಂಬಂಧಿಸಿದ ವ್ಯವಹಾರಕ್ಕೆ ಬರುವವರು ಮಯೋವೃದ್ದರು ವಿಧವಾ ವೇತನ ಪಡೆಯುವವರು. ಉಳಿತಾಯ ಖಾತೆಯನ್ನು ತಗೆದವರು. ಲಕೋಟೆ ರವಾನೆ ಕಳುಹಿಸಲು ಬರತ್ತಾರೆ ಅವರನ್ನು ಲಾಠಿಯನ್ನು ಹಿಡಿದು ನಾಗರಿಕರನ್ನು ಒಳಗೆ ಬಿಡುವ ಈ ಪ್ರಕ್ರಿಯೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಗ್ರಾಹಕರನ್ನು ಸದ್ವರ್ತನೆಯಿಂದ ನಡೆಸಿಕೊಳ್ಳಬೇಕು. ಮನುಷ್ಯರನ್ನು ಪ್ರಾಣಿಗಳಂತೆ ನೋಡಬೇಡಿ. ಅತ್ಯಂತ ಕಡಿಮೆ ಪ್ರಮಾಣದ ಜನರು ಅಂಚೆ ಕಚೇರಿಗೆ ಆಗಮಿಸುತ್ತಾರೆ. ಗದ್ದಲ ಹೆಚ್ಚಾದರೆ ಪೆÇಲೀಸರ ಸಹಾಯ ಪಡೆದುಕೊಳ್ಳಿ. ಇಲಾಖೆಯ ಈ ವರ್ತನೆ ಮಾನವೀಯ ಮೌಲ್ಯದ ಅಪಮಾನವಾಗಿದೆ. ಈ ರೀತಿ ಮಾಡುವದನ್ನು ತಕ್ಷಣ ನಿಲ್ಲಿಸಬೇಕು. ಮಾನವರನ್ನು ಮಾನವರನ್ನಾಗಿ ಗೌರವದಿಂದ ಕಾಣುವ ದೃಷ್ಟಿಕೋನ ಇರಬೇಕು ಎಂದು ಹಾಸಿಂಪೀರ ವಾಲೀಕಾರ ಇಲಾಖೆಯ ವರ್ತನೆಯನ್ನು ಖಂಡಿಸಿದ್ದಾರೆ