ಕೇಂದ್ರೀಯ ವಿಶ್ವವಿದ್ಯಾಲಯದ ಬಗ್ಗೆ ಅಪಪ್ರಚಾರ: ಹೋರಾಟಗಾರರ ವಿರುದ್ಧ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮನವಿ

ಕಲಬುರಗಿ,ಅ.10: ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗಾಗಿ ಸ್ಥಾಪನೆಯಾದ. ವಿಶ್ವವಿದ್ಯಾಲಯವನ್ನು ನಾವೆಲ್ಲರು ಕೂಡಿ ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯೋಣ. ಅದಕ್ಕಾಗಿ ನಾನು ಈ ಭಾಗದ ಎಲ್ಲ ಜನರಲ್ಲಿ, ಪ್ರಜಾ ಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ವಿಶ್ವವಿದ್ಯಾಲಯದ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆ ಎಚ್ಚರದಿಂದಿರಬೇಕು ಮತ್ತು ಅಂತಹ ಯಾವುದೇ ಚಟುವಟಿಕೆಗಳಿಗೆ ಮಹತ್ವ ನೀಡಬಾರದೆಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಅವರು ಮನವಿ ಮಾಡಿದ್ದಾರೆ.
ಪೆÇ್ರ. ಬಟ್ಟು ಸತ್ಯನಾರಾಯಣ್ ಅವರು ಕುಲಪತಿಗಳಾಗಿ ಎರಡು ವರ್ಷಗಳು ಕಳೆದಿದ್ದು ಸಾಕಷ್ಟು ಪ್ರಗತಿ ಕಂಡಿದೆ ಎಂದು ಅವರು ಹೇಳಿಕೆಯಲ್ಲಿ ಕುಲಪತಿಗಳ ಕಾಲದ ಅಭಿವೃದ್ಧಿಯ ಪಕ್ಷಿನೋಟವನ್ನು ವಿವರಿಸಿದ್ದಾರೆ.
ನೇಮಕಾತಿ: ಖಾಲಿ ಇರುವ ಸಹಾಯಕ ಪ್ರದ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗಳ ಮೊದಲನೆ ಸುತ್ತಿನ ನೇಮಕಾತಿ ಪ್ರಕ್ರಿಯೆ ಮುಗಿದು, ಉಳಿದ ಹುದ್ದೆಗಳಿಗೆ ಮರಳಿ ಅರ್ಜಿ ಕರೆದು ನೇಮಕಾತಿ ಪ್ರಕ್ರಿಯೆ ಕೊನೆಯ ಹಂತಕ್ಕೆ ಬಂದು ತಲುಪಿದೆ. ಅದರಂತೆ ಖಾಲಿ ಇರುವ ಬೋಧಕೇತರ ಸಿಬ್ಬಂದಿಯ ನೇಮಕಾತಿ ಪ್ರರ್ಕಿಯೆ ಕೂಡ ಪ್ರಗತಿಯಲ್ಲಿದ್ದು ಈಗಾಗಲೆ 18 ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಉಳಿದ ಸ್ಥಾನಗಳ ನೇಮಕಾತಿ ಪ್ರಕ್ರೀಯೆ ಕೊನೆಯ ಹಂತದಲ್ಲಿದೆ. 58 ಸಹಾಯಕ ಮತ್ತು ಸಹ ಪ್ರಾಧ್ಯಾಪಕರನ್ನು ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕರ ಹುದ್ದೆಗಳಿಗೆ ಬಡ್ತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹೊಸ ಕೋರ್ಸ್‍ಗಳು: ಎಂಟೆಕ್ ಪವರ್ ಮತ್ತು ಎನರ್ಜಿ ಇಂಜಿನಿಯರಿಂಗ್, ಎಂಟೆಕ್ ಆರ್‍ಎಫ್ & ಮೈಕ್ರೋವೇವ್ ಇಂಜಿನಿಯರಿಂಗ್, ಎಮ್‍ಎ. ತಬಲಾ ಮತ್ತು ಎಮ್‍ಎ ಸಂಗೀತದಲ್ಲಿ (ಹಿಂದುಸ್ಥಾನಿ ಗಾಯನ) ಹೊಸ ಸ್ನಾತಕೋತ್ತರ ಕೋರ್ಷಗಳ ಆರಂಭ. ಗಣಕ ವಿಜ್ಞಾನ, ಗಣಿತ, ಸಮಾಜ ಕಾರ್ಯ, ಇತಿಹಾಸ, ಜೀವ ವಿಜ್ಞಾನ ಮತ್ತು ಕಂಪ್ಯೂಟೇಶನಲ್ ಗಣಿತಶಾಸ್ತ್ರದಲ್ಲಿ ಹೊಸ ಸ್ನಾತಕ ಕೋರ್ಷಗಳ ಆರಂಭ ಮಾಡಲಾಗಿದೆ. ಇದಲ್ಲದೆ ಹೊಸ ಶಿಕ್ಷಣ ನೀತಿಯ ಅನ್ವಯ ಅನೇಕ ಕೌಶಲ್ಯ ಮತ್ತು ಮೌಲ್ಯಾಧಾರಿತ ವಿಷಯಗಳನ್ನು ಪಠ್ಯದಲ್ಲಿ ಅಳವಡಿಸಲಾಗಿದೆ. ಲಾಜಿಸ್ಟಿಕ್ಸ್ ಮತ್ತು ಸಂಪರ್ಕ ಸೇವೆ, ವಚನ ಸಾಹಿತ್ಯ, ಇತ್ಯಾದಿಗಳು ಆರಂಭಗೊಂಡಿವೆ ಎಂದು ಅವರು ನಿದರ್ಶನ ನೀಡಿದ್ದಾರೆ.
ನ್ಯಾಕ್ ಮಾನ್ಯತೆ: ವಿಶ್ವವಿದ್ಯಾಲಯವು 2016ರಲ್ಲಿ ತನ್ನ ಮೊದಲ ಸುತ್ತಿನ ನ್ಯಾಕ್ ಮಾನ್ಯತೆಯನ್ನು ಮುಗಿಸಿ ಬಿ++ ಗ್ರೇಡ ಪಡೆದಿದೆ. ಈಗ ಎರಡನೆ ಸುತ್ತಿನ ನ್ಯಾಕ್ ಮಾನ್ಯತೆಯ ಕಾರ್ಯ ಭರದಿಂದ ನಡೆದಿದ್ದು ಈ ಬಾರಿ ಉನ್ನತ ಗ್ರೇಡ ಪಡೆಯುವ ದಿಕ್ಕಿನಲ್ಲಿ ಕಾರ್ಯಗಳು ಸಾಗುತ್ತಿವೆ. ಏನ್ ಆರ್ ಐ ಎಫ್ ಶ್ರೇಯಾಂಕದಲ್ಲಿ ಮೊಟ್ಟ ಮೊದಲಬಾರಿಗೆ 156ನೇ ಶ್ರೇಣಿ ಪಡೆದುಕೊಂಡು ಗುಣಾತ್ಮಕ ಶಿಕ್ಷಣದತ್ತ ಸಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಶ್ಲಾಘಿಸಿದ್ದಾರೆ.
ಸಂಶೋಧನೆಗೆ ಒತ್ತು ಕೊಡುವ ನಿಟ್ಟಿನಲ್ಲಿ ಪ್ರತಿ ವರ್ಷ ಉತ್ತಮ ಸಂಶೋಧನಾ ಶಿಕ್ಷಕ ಪ್ರಶಸ್ತಿ ನಿಡಿ ಶಿಕ್ಷಕರನ್ನು ಗುಣಾತ್ಮಕ ಸಂಶೋಧನೆಗೆ ಪ್ರೇರೆಪಿಸಲಾಗುತ್ತಿದೆ. ನಮ್ಮ ಅನೇಕ ಶಿಕ್ಷಕರು ವೈಯಕ್ತಿಕವಾಗಿ ಹಾಗು ಗುಂಪಾಗಿ ಸುಮಾರು 30 ಐಸಿಎಸ್‍ಎಸ್‍ಆರ್ ಮತ್ತು ವಿವಿಧ ಸಂಶೋಧನಾ ಸಂಸ್ಥೆಗಳಿಂದ ಒಂದು ಕೋಟಿಗೂ ಹೆಚ್ಚಿನ ರೂ.ಗಳ ಮೌಲ್ಯದ ಪೆÇ್ರಜೆಕ್ಟಗಳನ್ನು ಪಡೆದಿದ್ದಾರೆ. ಪ್ರಾಧ್ಯಾಪಕರಿಗೆ ಕರ್ನಾಟಕ ಸರ್ಕಾರದ ಯುವ ವಿಜ್ಞಾನಿ ಪ್ರಶಸ್ತಿ, ಜಗತ್ತಿನ ಶೇಕಡಾ 2ರ ಪ್ರತಿಷ್ಟಿತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ, ಸಂಶೋಧನೆಗಾಗಿ ಪೆಟೆಂಟ್, ಜನ ಉಪಯೋಗಿ ಸಂಶೋಧನೆಗಳ ಕೋವಿಡ್ ಲ್ಯಾಬ್, ಅಮೇರಿಕಾದ ಸಂಸ್ಥೆಗಳಿಂದ ಉತ್ತಮ ಸಂಶೋಧನಾ ಲೇಖನ ಪ್ರಶಸ್ತಿ ಹೀಗೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಎಲ್ಲರ ಗಮನ ಸೇಳೆಯುವ ತ್ತಮ ಗುಣಮಟ್ಟದ ಸಂಶೋಧನಾ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹೊಸ ವಿದ್ಯಾರ್ಥಿ ವಸತಿ ನಿಲಯಗಳ ನಿರ್ಮಾಣ ಹಾಗು ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ವಸತಿ ನಿಲಯದಲ್ಲಿ ಪ್ರವೇಶ ನೀಡಲಾಗುತ್ತಿದೆ. ದೇಶದ ಯಾವುದೇ ವಿಶ್ವವಿದ್ಯಾಲಯದಲ್ಲಿ ಶೇಕಡಾ 100ರಷ್ಟು ವಸತಿ ನಿಲಯದ ಸೌಲಭ್ಯ ದೊರೆಯುವುದಿಲ್ಲ. ಹಸಿರು ಕ್ಯಾಂಪಸ ನಿರ್ಮಾಣಕ್ಕಾಗಿ ಸಾವಿರಾರು ಸಸಿಗಳನ್ನು ನೆಡಲಾಗಿದೆ. ವಿಶೇಷವಾಗಿ ಹಣ್ಣಿನ ಸಸಿಗಳನ್ನು ನೆಡಲಾಗಿದೆ. ಇದರಿಂದ ಸಾವಿರಾರು ಪಸುಪಕ್ಷಿಗಳಿಗೆ ಸಂತೋಷದ ತಾಣವಾಗಿದೆ. ಹೊಸ ವರ್ಗ ಕೋಣೆಗಳ ಹಾಗು ಶೈಕ್ಷಣಿಕ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ. ಕ್ರೀಡೆ ಮತ್ತು ಸಾಂಸ್ಕøತಿಕ ಚಟುವಟಿಕೆಗಳಿಗಾಗಿ ಸುಸಜ್ಜಿತ ಬಹುಉಪಯೋಗಿ ಪ್ರಾಂಗಣ, ಹೊರಾಂಗಣ ಮತ್ತು ಒಳಾಂಗಣ ಕ್ರೀಡೆಗಳಿಗಾಗಿ ಕ್ರಿಡಾಂಗಣ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣ ಮಾಡುವುದರ ಮೂಲಕ ವಿಧ್ಯಾರ್ಥಿಗಳ ಕ್ರಿಡಾ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಸುಸಜ್ಜಿತ ಗ್ರಂಥಾಲಯಕ್ಕೆ ಬೇಕಾದ ಪುಸ್ತಕ ಮತ್ತು ಜರ್ನಲ್ಗಳ ವ್ಯವಸ್ಥೆ. ಗಣಕಿಕೃತ ಗ್ರಂಥಾಲಯ ವ್ಯವಸ್ಥೆ, ಪತ್ರಿಕೋದ್ಯಮ ವಿಭಾಗಕ್ಕೆ ಸುಸಜ್ಜಿತ ಸ್ಟುಡಿಯೋ ನಿರ್ಮಾಣ, ಇಂಗ್ಲಿಷ ಭಾμÁ ಲ್ಯಾಬ್, ಫಿಲ್ಮ ಲ್ಯಾಬ್ ಮತ್ತು ಕಂಪೂಟರ ಲ್ಯಾಬ್‍ಗಳ ಪ್ರಾರಂಭಮಾಡುವ ಮೂಲಕ ವಿಧ್ಯಾರ್ಥಿಗಳಲ್ಲಿ ವಿವಿಧ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನಮಾಡುತ್ತಿದೆ. ವಿದ್ಯಾರ್ಥಿಗಳ ಕ್ಯಾಂಪಸ್ ಪ್ಲೆಸಮೆಂಟ್‍ಗಾಗಿ ನೇಮಕಾತಿ ವಿಭಾಗ. ಈ ವರ್ಷ (2022-2023) ಸುಮಾರು 200 ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೆಸಮೆಂಟ್ ಮೂಲಕ ಉದ್ಯೋಗ ಪಡೆದಿದ್ದಾರೆ. ವಿಶ್ವವಿದ್ಯಾಲಯದ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಸಾಮಾನ್ಯರಿಗೆ ಇಂಗ್ಲೀಷ್ ಭಾμÉಯ ಕಲಿಕೆಗಾಗಿ ಇಂಗ್ಲೀಷ ಭಾμÁ ಕೇಂದ್ರದ ಸ್ಥಾಪನೆ ಮಾಡಿ ವಿಧ್ಯಾರ್ಥಿಗಳ ಉದ್ಯೋಗರ್ಹತೆಯನ್ನು ಇನ್ನಷ್ಟು ಉರ್ಧಿಸುವ ಮಹತ್ತರ ಕಾರ್ಯ ನಡೆಯುತ್ತಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಸುರಕ್ಷತೆಗಾಗಿ ಹೆಚ್ಚಿನ ನುರಿತ ಸುರಕ್ಷಾ ಸಿಬ್ಬಂಧಿಗಳ ನೇಮಕಾತಿ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪರೀಕ್ಷಾ ವಿಭಾಗದ ಮತ್ತು ಪ್ರವೇಶಾತಿ ಪ್ರಕ್ರೀಯೆಯ ಸಂಪೂರ್ಣ ಗಣಕಿಕರಣ ಮಾಡಲಾಗಿದೆ. ಪ್ರಸಾರಂಗದ ಉನ್ನತಿಕರಣ ಮತ್ತು ಹೊಸ ಗ್ರಂಥಗಳ ಪ್ರಕಟಣೆಗೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ವಿಶ್ವ ವಿದ್ಯಾಲಯದಲ್ಲಿ 22 ಕ್ಕಿಂತ ಹೆಚ್ಚಿನ ರಾಜ್ಯಗಳಿಂದ ಸುಮಾರು 2200ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು ದಿನ ನಿತ್ಯ ಪಾಠ ಪ್ರವಚನದ ಜೋತೆಗೆ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳು, ಸಂಶೋಧನಾಕಾರ್ಯಗಳು, ವಿಶೇಷ ಉಪನ್ಯಾಸಗಳು ಹಾಗು ಶೈಕ್ಷಣಿಕ ಚಟುವಟಿಕೆಗಳಿಂದ ವಿಶ್ವವಿದ್ಯಾಲಯವು ಕಂಗೊಳಿಸುತ್ತಿದೆ ಎಂದು ಅವರು ಶ್ಲಾಘಿಸಿದ್ದಾರೆ.