ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಸಾಧನೆ

ಕಲಬುರಗಿ:ಮಾ.26:ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಸಂಶೋಧನಾ ಸಹವರ್ತಿ ಭಾಗ್ಯಶ್ರೀ ಅವರು ‘ಜಾಗತಿಕ ತಾಪಮಾನ ಮತ್ತು ಹವಾಮಾನ ಬದಲಾವಣೆ’ ಎಂಬ ಥೀಮ್ ಬಗೆಗಿನ ಪೆÇೀಸ್ಟರ್ ಪ್ರಸ್ತುತಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಭಾಗ್ಯಶ್ರೀ ಅವರು ಕಾಲೋಚಿತ ಮಳೆ ಮತ್ತುತಾಪಮಾನದ ಮಾದರಿಯ ಪ್ರವೃತ್ತಿ ವಿಶ್ಲೇಷಣೆ: ಪರಿಸರ ಬದಲಾವಣೆಗಳ ಮೇಲೆ ಪರಿಣಾಮಗಳು ಎಂಬ ವಿಷಯದ ಮೇಲೆ ಪೋಸ್ಟರ್ ಪ್ರಸ್ತುತಿ ಮಾಡಿದ್ದರು.
ಭೂವಿಜ್ಞಾನ ವಿಭಾಗದ ಇನ್ನೊಬ್ಬ ಸಂಶೋಧನಾ ವಿದ್ಯಾರ್ಥಿ ಶರತ್‍ರಾಜ್ ಬಿ. ಅವರು ‘ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್’ ಥೀಮ್ ಅಡಿಯಲ್ಲಿ ‘ರಿಮೋಟ್ ಸೆನ್ಸಿಂಗ್ ತಂತ್ರಗಳನ್ನು ಬಳಸಿಕೊಂಡು ಹಾರ್ಡ್‍ರಾಕ್ ಭೂಪ್ರದೇಶದಲ್ಲಿನ ಆಳವಿಲ್ಲದ ಜಲಚರಗಳ ವಲಯಗಳ ತಿಳುವಳಿಕೆ: ಕರ್ನಾಟಕದ ಲಿಂಗಾಸಾಗರ್‍ನ ಒಂದು ಅಧ್ಯಯನ ಅಧ್ಯಯನ.’ ಎಂಬ ವಿಷಯದ ಮೇಲೆ ನೀಡಿದಂತಹ ಮೌಖಿಕ ಪ್ರಸ್ತುತಿಯಲ್ಲಿ ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಳೆದ 23 ಮತ್ತು 24ರಂದು ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಜರುಗಿದ “ಜೀವವೈವಿಧ್ಯ ಸಂರಕ್ಷಣೆ ಮತ್ತು ಭವಿಷ್ಯದ ಕಾರ್ಯತಂತ್ರಗಳು (ಎನ್‍ಸಿಬಿಸಿಎಫ್‍ಎಸ್ -2021)” ಕುರಿತಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಸಾಧನೆ ಮಾಡಿದ್ದಾರೆ. ಇಬ್ಬರೂ ಪ್ರೊ. ಮಹಮ್ಮದ್ ಅಸ್ಲಾಮ್ ಎಂ.ಎ ಅವರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.