
(ಸಂಜೆವಾಣಿ ವಾರ್ತೆ)ಬಳ್ಳಾರಿ, ಆ.15: ಇಲ್ಲಿನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ವಿಶ್ವನಾಥಮ್ ಬಡ್ತಿ ಹೊಂದಿ ಒರಿಸ್ಸಾದ ಭುವನೇಶ್ವರಕ್ಕೆ ವರ್ಗಾವಣೆ ಸಂದರ್ಭದಲ್ಲಿ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಗುರುವಂದನೆ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದರುವಿದ್ಯಾರ್ಥಿಗಳಾದ ಡಾ. ಹನುಮಂತಪ್ಪ ,ಡಾ. ಹಳ್ಳಿ ಕರಿಬಸಪ್ಪ, ಡಾ. ಜಂಭನಗೌಡ, ಡಾ. ರಾಜಶೇಖರ್ ಅವರು ಸಮಾರಂಭದಲ್ಲು ಮಾತನಾಡಿ ಬೋಧನೆಯಲ್ಲಿ ಅವರ ಶ್ರದ್ಧೆ ಹಾಗೂ ಬಡ ಮತ್ತು ಗ್ರಾಮೀಣ ವಿಧ್ಯಾರ್ಥಿಗಳ ಬಗ್ಗೆ ಇದ್ದ ಕಾಳಜಿ ಯನ್ನು ಶ್ಲಾಘಿಸಿದರು.ವಿಶ್ವನಾಥಮ್ ಅವರು ಮಾತನಾಡಿ ಜವಾಹರ್ ನವೋದಯ ವಿದ್ಯಾಲಯದಲ್ಲಿನ ತಮ್ಮ ಅನುಭವಗಳನ್ನು ಹಾಗೂ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಕಷ್ಟ ಕಾರ್ಪಣ್ಯಗಳನ್ನು ಹಾಗೂ ವಿದ್ಯಾರ್ಜನೆಗೆ ಅವರ ಕಠಿಣ ಸಾಧನೆ ಬಗ್ಗೆ ಹೆಮ್ಮೆ ಹಾಗೂ ಸಂತೋಷ ವ್ಯಕ್ತಪಡಿಸಿದರು. ಉಪನ್ಯಾಸಕ ಇಮ್ರಾನ್ ಅಹಮದ್ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಅವರ ವಿದ್ಯಾರ್ಥಿಗಳಾದ ಮಂಜುನಾಥ, ಬಸಪ್ಪ, ಶರಣ ಬಸವ, ಚನ್ನಪ್ಪ, ರಾಧಾಕೃಷ್ಣ, ವೆಂಕಟೇಶ್,ಅಮರೇಶ್, ವೀರೇಶಪ್ಪ, ರವಿಚಂದ್ರ, ಮತ್ತಿತರರು ಭಾಗವಹಿಸಿದ್ದರು.
One attachment • Scanned by Gmail