ಕೇಂದ್ರೀಯ ಮೀಸಲು ಪೆÇಲೀಸ್ ಪಡೆ ಸೈನಿಕ ನಿವೃತ್ತಿ ಸಿಂಘೋಡೆಗೆ ಸುಂಧಾಳ ಗ್ರಾಮಸ್ಥರಿಂದ ಸನ್ಮಾನ

(ಸಂಜೆವಾಣಿ ವಾರ್ತೆ)
ಔರಾದ : ಸೆ.19:ತಾಲೂಕಿನ ಸುಂಧಾಳ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನ ಪ್ರಯುಕ್ತ ಕೇಂದ್ರೀಯ ಮೀಸಲು ಪೆÇಲೀಸ್ ಪಡೆ ಸೈನಿಕ ನಿವೃತ್ತಿ ಸಿಂಘೋಡೆ ಅವರಿಗೆ ಸುಂಧಾಳ ಗ್ರಾಮಸ್ಥರಿಂದ ಗೌರವಿಸಿ ಸನ್ಮಾನಿಸಲಾಯಿತು.
ಕೇಂದ್ರ ಗೃಹ ಮಂಡಳಿ ವತಿಯಿಂದ ಪ್ರಶಂಸೆ ಪತ್ರ ನೀಡಿ ಸರ್ಕಾರ ಗೌರವಿಸಿದೆ. 1974ರಲ್ಲಿ ಕೇಂದ್ರೀಯ ಮೀಸಲು ಪೆÇಲೀಸ್ ಪಡೆಗೆ ಭರ್ತಿಯಾಗಿ ಜಮ್ಮು ಕಶ್ಮೀರ, ಮಿಜೋರಾಂ, ಶ್ರೀನಗರ, ಅಸ್ಸಾಂ, ಮಣಿಪುರ ಸೇರಿದಂತೆ ನಾನಾ ಕಡೆ ಸೇವೆ ಸಲ್ಲಿಸುತ್ತಿರುವ ನಮ್ಮೂರಿನ ಸುಪುತ್ರ ನಿವೃತ್ತಿ ಸಿಂಘೋಡೆ ಅವರು ಸರಕಾರದಿಂದ ಅನೇಕ ಪ್ರಶಸ್ತಿ ಪಡೆದದ್ದು ನಮ್ಮೂರಿಗೆ ಹೆಮ್ಮೆಯ ವಿಷಯ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಿಯಾಂಕಾ ರಾವಸಾಬ ಪಾಟೀಲ ತಿಳಿಸಿದರು.
ಈ ಸಂದರ್ಭದಲ್ಲಿ ರಾವಸಾಬ ಪಾಟೀಲ, ಚಂದ್ರಶೇಖರ ಪಾಟೀಲ, ರಾಮೇಗೌಡ ಕಲಾಲ, ಮಾರುತಿ ಸಿಂಘೋಡೆ, ಬಾಬುರಾವ ಗಂಗೂಜಿ, ಶರಣಪ್ಪ ಗಾದಗೆ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.