ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಪೋಲಿಸ ಬಂದೊಬಸ್ತಿಗೆ ಆಗ್ರಹ: ಶೇಷರಾವ ಮಾನೆ

(ಸಂಜೆವಾಣಿ ವಾರ್ತೆ)
ವಿಜಯಪುರ:ಜು.11: ಕರ್ನಾಟಕ ರಕ್ಷಣಾ ವೇದಿಕೆ (ನಮ್ಮ ಬಣ) ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಕಳ್ಳತನ ನಡೆದ ಪ್ರಕರಣವನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲಾ ಪದಾಧಿಕಾರಿಗಳು ಪ್ರತಿಭಟಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ನಮ್ಮಬಣ) ಜಿಲ್ಲಾಧ್ಯಕ್ಷರಾದ ಶೇಷರಾವ ಮಾನೆ ಮಾತನಾಡಿ ಕರ್ನಾಟಕ ಸರಕಾರದ ಶಕ್ತಿ ಯೋಜನೆ ಪ್ರಾರಂಭವಾದ ದಿನದಿಂದ ದಿನದಿಂದ ದಿನಕ್ಕೆ ಮಹಿಳೆಯರು ಹೆಚ್ಚು ಪ್ರಯಾಣ ಮಾಡುತ್ತಿದ್ದು ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ದಿನಾಂಕ 2-7-2023 ರಂದು ನಗರದ ಶ್ರೀಮತಿ ದಿಲಶಾದ ಜಮೀರ ಬಳ್ಳಾರಿ ಇವರು ಮದುವೆ ಸಮಾರಂಭಕ್ಕೆ ಹೋಗುತ್ತಿದ್ದು ಬಸ್ ಹತ್ತುವಾಗ ಬ್ಯಾಗನಲ್ಲಿದ್ದ 1 ಲಕ್ಷ 30 ಸಾವಿರದ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದು ಗಾಂಧಿಚೌಕ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾನ್ಯ ಪೋಲಿಸ ವರಿಷ್ಠಾಧಿಕಾರಿಗಳು ಕೇಂದ್ರ ಬಸ್ ನಿಲ್ದಾಣದಲ್ಲಿ ಮುಂದೆ ನಡೆಯುವ ಪ್ರಕರಣಗಳು ಸಂಭವಿಸಿದಂತೆ ಜಿಲ್ಲಾ ಪೋಲಿಸ ಬಿಗಿಬಂದೋಸ್ತನ್ನು ನೀಡಿ ಸಾರ್ವಜನಿಕರಿಗೆ ಆಗತಕ್ಕಂತಹ ತೊಂದರೆಗಳನ್ನು ನಿವಾರಿಸಬೇಕು ಎಂದರು.
ಜಿಲ್ಲಾ ಗೌರವ ಅಧ್ಯಕ್ಷರಾದ ಎಂ.ಎಂ. ಖಲಾಸಿ ಮಾತನಾಡಿ ಮಹಿಳೆಯರು ತಮ್ಮ ದಿನದಿತ್ಯದ ಅನೇಕ ಕಾರ್ಯಕ್ರಮಗಳ ಅನ್ವಯ ಪ್ರಯಾಣಿಸುತ್ತಿರುವಾಗ ಅಮೂಲ್ಯ ಆಭರಣಗಳನ್ನು ತೊರಿಕೆ ರೀತಿಯಲ್ಲಿ ಧರಿಸದೆ ಪ್ರಯಾಣ ಬೆಳೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಭಾರತಿ ಟಂಕಸಾಲಿ, ರಿಜವಾನ ಬೇಗಂ, ಹಸೀನಾ, ರೂಪಾ, ಸಲ್ಮಾ, ರಜೀಯಾ, ಕೌವಸಾ, ಮದೀನಾ, ಜಯಶ್ರೀ, ರಿಹಾನಾ, ಭಾರತಿ, ದಿಲಶಾದ, ಅಮೀನಸಾಬ, ಜಮೀರ ಬಳ್ಳಾರಿ ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ತಿತರಿದ್ದರು.