ಕೇಂದ್ರಸರ್ಕಾರ ಜಾರಿಗೆತಂದಿರುವ ಕೃಷಿ ಮಸೂದೆಗಳನ್ನು ಹಿಂಪಡೆಯಲು ಆಗ್ರಹ

ಕುರುಗೋಡು.ಡಿ 27 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ, ಅಗತ್ಯವಸ್ತುಗಳ ತಿದ್ದುಪಡಿ ಸೇರಿದಂತೆ ಇತರೆ ಕಾಯಿದೆಗಳ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕೆಂದು ಪ್ರಾಂತರೈತ ಸಂಘದ ಜಿಲ್ಲಾದ್ಯಕ್ಷ ವಿಎಸ್.ಶಿವಶಂಕರ್ ಸರ್ಕಾರವನ್ನು ಆಗ್ರಹಿಸಿದರು.
ಅವರು ಶನಿವಾರ ಪಟ್ಟಣದ ಪ್ರಾಂತರೈತ ಸಂಘದ ಕಛೇರಿ ಆವರಣದಲ್ಲಿ ಅಖಿಲಭಾರತ ರೈತಸಂಘರ್ಷ ಸಮನ್ವಯ ಸಮಿತಿ ಕುರುಗೋಡು ತಾಲೂಕು ಸಮಿತಿನೇತ್ರುತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ರೈತಸಂಕುಲ ನಾಶಮಾಡುವ ಕೃಷಿಮಸೂದೆಗಳು ಪುಸ್ತಕಬಿಡುಗಡೆ’ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಕ್ರುಷಿಮಸೂದೆಗಳನ್ನು ಜಾರಿಗೆತಂದರೆ ಜಗತ್ತಿನ ಬಹುಸಂಖ್ಯಾತ ರೈತರು, ಕ್ರುಷಿಕೂಲಿಕಾರರು, ಕಾರ್ಮಿಕರು ಬೀದಿಪಾಲಾಗುತ್ತಾರೆ ಎಂದು ಆರೋಪಿಸಿದರು.
ರಸ್ತೆಬದಿವ್ಯಾಪಾರಿಸಂಘದ ಅದ್ಯಕ್ಷ ಹೆಚ್‍ಎಂ.ವಿಶ್ವನಾಥಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಅನ್ನನೀಡಿದವರ ಮನೆಗೆ ಕನ್ನಹೊಡೆಯುವ ಕೆಲಸಮಾಡುತ್ತಿದೆ ಎಂದು ಸರ್ಕಾರವಿರುದ್ದ ಕಿಡಿಕಾರಿದರು. ತಾಲೂಕು ಸಮನ್ವಯ ಸಮಿತಿಯ ಸಂಚಾಲಕ ಗಾಳಿಬಸವರಾಜ್ ಮಾತನಾಡಿ, ಬಿಜೆಪಿ ಸರ್ಕಾರ ಕೃಷಿಮಸೂದೆ ತಿದ್ದುಪಡಿಗಳನ್ನು ಮಾಡಿ ರೈತರನ್ನು ನಾಶಮಾಡಲು ಹೊರಟಿದೆ ಎಂದು ಆರೋಪಿಸಿದರು. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ತಮ್ಮ ಬಿಗಿಪಟ್ಟನ್ನು ಬದಿಗೊತ್ತಿ ಕ್ರುಷಿಮಸೂದೆಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿ ಕುರುಗೋಡು ತಾಲೂಕು ಅದ್ಯಕ್ಷ ಕೆ.ಈಶ್ವರ, ಹಮಾಲಸಂಘದ ಅದ್ಯಕ್ಷ ಸೋಮಪ್ಪ, ಅಂಗನವಾಡಿ ನೌಕರಸಂಘದ ಗೀತಮ್ಮ, ರುದ್ರಮ್ಮ, ವಿಮಲ, ದೇವದಾಸಿ ಮಹಿಳಾಸಂಘದ ಯಂಕಮ್ಮ, ಕೆಂಚಪ್ಪ, ವಕೀಲಸಂಘದ ಆಂಜಿನೇಯ, ಹುಲೆಪ್ಪ, ಹನುಮಂತಪ್ಪ, ತುಂಗಭದ್ರರೈತಸಂಘದ ಅದ್ಯಕ್ಷ ಬೀಮನಗೌಡ, ಇತರರು ಇದ್ದರು.