
ಶಹಾಬಾದ:ಅ.1:ದೇಶದ ಈಶಾನ್ಯ ರಾಜ್ಯವಾದ ಮಣಿಪುರ ಶಾಂತಿ, ಸಹಬಾಳ್ವೆಗೆ ಹೆಸರುವಾಸಿಯಾಗಿದ್ದು, ಇಂದು ಕೇಂದ್ರ, ರಾಜ್ಯ ಸರ್ಕಾರದ ತಪ್ಪು ನೀತಿಗಳಿಂದ.ಮೈತೇಯ, ಕುಕಿ ಜನಾಂಗಳು ಪರಸ್ಪರ ವೈರಿಯಂತೆ ಗಲಭೆ, ಧೊಂಬಿ,ಕೊಲೆ, ಸುಲಿಗೆ ನಡೆಸುತ್ತಿವೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.
ಅವರು ಸೋಮವಾರ ಬೆಳಗ್ಗೆ ನಗರದ ಪ್ರಗತಿಪರ ಸಂಘಟನೆಗಳು ಹಾಗೂ ಪ್ರಗತಿಪರರ ಒಕ್ಕೂಟದಿಂದ ಮಣಿಪುರ ರಾಜ್ಯದ ಹಿಂಸಾಚಾರ ಖಂಡಿಸಿ, ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡುತ್ತ, ಕಳದೆ ಮೂರು ತಿಂಗಳಿಂದ ನಡೆದ ಸತತ ಹಿಂಸೆ,ಕೊಲೆ, ಲೂಟಿ, ಅತ್ಯಾಚಾರ, ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಮುಖ್ಯವಾಗಿ ಅಕ್ರಮ ವಲಸೆ, ಮಾದಕ ವಸ್ತುಗಳ ದಂಧೆ, ಭೂ ಮಾಫಿಯಾ, ಭಯೋತ್ಪಾದನೆಗಳ ಸಂಘಟನೆಗೆ ಕೈವಾಡ, ಮಣಿಪುರದ ಭೂಗರ್ಭದಲ್ಲಿ ಅಡಗಿರುವ ಅಪಾರ ಪ್ರಮಾಣದ ನಿಕ್ಷೇಪಗಳ ಲೂಟಿ ಮಾಡಲು ಹೊರಟಿರುವ ಅದಾನಿಯಂತಹ ಕಾರ್ಫೊರೇಟ್ ಕುಳಗಳ ಸಂಚು ಇದಕ್ಕೆ ಬೆಂಬಲವಾಗಿ ನಿಂತಿರುವದು ಪ್ರಮುಖ ಕಾರಣವಾಗಿದೆ ಎಂದು ಆರೋಪಿಸಿದರು.
ಗುಂಡಮ್ಮಾ ಎಐಎಂಎಸ್‍ಎಸ್ ಜಿಲ್ಲಾಧ್ಯಕ್ಷೆ ಗುಂಡಮ್ಮಾ ಮಡಿವಾಳ, ಎಂಸಿಸಿ ಶಾಲೆಯ ಮುಖ್ಯಸ್ಥೆ ಸಿಸ್ಟರ್ ಲಿನೇಟ್ ಸಿಕ್ವೇರಾ, ಕರಾದಸಂಸ ಜಿಲ್ಲಾ ಸಂ.ಸಂಚಾಲಕ ಕೃಷ್ಣಪ್ಪ ಕರಣಿಕ, ಸಾಬಣ್ಣ ಗುಡುಬಾ, ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ, ಗಣಪತರಾವ ಮಾನೆ, ಸೇಖ ಸಾಹೀರಾ ಮಾತನಾಡಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಪೂಜಪ್ಪ ಮೇತ್ರೆ, ಜಗನ್ನಾಥ ಎಸ.ಎಚ್. ಮಹ್ಮದ ಉಬೇದುಲ್ಲಾ. ಡಾ. ಅಹ್ಮದ ಪಟೇಲ,ಬಸವರಾಜ ಮಯೂರ, ಮಲ್ಲಣ್ಣ ಮಸ್ಕಿ, ರಾಜೇಶ ಯನಗುಂಟಿಕರ್, ಕಿರಣ ಚವ್ಹಾಣ, ಸಾಬೇರಾ ಬೇಗಂ, ನವನಾಥ ಕುಸಾಳೆ, ಮಹಾದೇವ ತರನಳ್ಳಿ, ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ಬೆಳಗ್ಗೆ ಬಸವೇಶ್ವರ ವೃತ್ತದಿಂದ ಪ್ರತಿಭಟನೆ ಪ್ರಾರಂಭಿಸಲಾಯಿತು. ನಗರ ಮುಖ್ಯ ರಸ್ತೆಯ ಮೂಲಕ ನೆಹರೂ ವೃತ್ತಕ್ಕೆ ಆಗಮಿಸಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯಲ್ಲಿ ಗಲಭೆ ನಿಯಂತ್ರಿಸಲು ವಿಫಲವಾದ ಮಣಿಪುರ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಲು, ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಗೆ ಸುಪ್ರೀಂ ಕೊರ್ಟ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗ ರಚಿಸಬೇಕು, ಆಕ್ರಮ ಶಸ್ತಾಸ್ತ್ರ ಹೊಂದಿದವರಿಂದ ವಶ ಪಡಿಸಕೊಳ್ಳಬೇಕು, ಅಕ್ರಮ ಮಾದಕ ದ್ರವ್ಯ ಗಸಗಸೆ ಕೃಷಿ ತಡೆಯಬೇಕು, ಅಕ್ರಮ ವಲಸೆ ತಡೆಯಲು ಕ್ರಮ, ಮಣಿಪುರ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಿ, ಆಗತ್ಯ ಆಹಾರ ವಸ್ತು, ಔಷಧ ಸರಬರಾಜು ಮಾಡಬೇಕು, ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ನೀಡಬೇಕು, ಅದಾನಿ ಯಂತಹ ಕಾರ್ಫೋರೇಟ್ ಕಂಪನಿಗಳು ಗಣಿಗಾರಿಕೆಗೆ ನೀಡಬೇಕೆಂದಿರು 65 ಸಾವಿರ ಎಕರೆ ಅರಣ್ಯ ಭೂಮಿ ಪ್ರಸ್ತಾಪ ಕೈಬಿಡಬೇಕು ಎಂಬ ಬೇಡಿಕೆಗಳ ಮನವಿಯನ್ನು ಉಪ ತಹಶೀಲ್ದಾರ ಮಲ್ಲಿಕಾರ್ಜುನ ರೆಡ್ಡಿ ಅವರ ಮೂಲಕ ಸಲ್ಲಿಸಲಾಯಿತು. ಮಾನವ ಸರಪಳಿಯಿಂದ ಕೆಲ ಕಾಲ ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.