ಕೇಂದ್ರದ ವಿರುದ್ಧ ಸಾವಿರಾರು ರೈತರ ಟ್ರ್ಯಾಕ್ಟರ್ ಜಾಥಾ

ನವದೆಹಲಿ.ಜ.೭- ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಾವಿರಾರು ರೈತರು ದೆಹಲಿಯ ಭಾಗದ ಗಡಿಯ ಸುತ್ತ ಟ್ರ್ಯಾಕ್ಟರ್ ಜಾಥಾ ನಡರಸಿ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕೃಷಿ ಕಾಯ್ದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಕಳೆದ ೪೨ ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ರೈತ ಹೋರಾಟಕ್ಕೆ ಬೆಲೆ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ರೈತರ ಗರಂ ಆಗಿದ್ದಾರೆ.

ಸಿಂಘು ಗಡಿಯಿಂದ ಟ್ರ್ಯಾಕ್ಟರ್ ಜಾಥಾ ಆರಂಭವಾಗಿದ್ದು ತಿಕ್ರಿ ಗಡಿ ಸೇರಿದಂತೆ ದೆಹಲಿಯ ಸಂಪರ್ಕ ಕಲ್ಪಿಸುವ ಎಲ್ಲ ಗಡಿ ಭಾಗಗಳನ್ನು ರೈತರು ಬಂದ್ ಮಾಡಿದ್ದಾರೆ.
ಜನವರಿ ೨೬ರಂದು ಗಣರಾಜ್ಯೋತ್ಸವದ ದಿನ ದೆಹಲಿಗೆ ಮುತ್ತಿಗೆ ಹಾಕಲು ಉದ್ದೇಶಿಸಿರುವ ರೈತ ನಾಯಕರು ಅದಕ್ಕೆ ಪೂರ್ವಭಾವಿಯಾಗಿ ಎಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ತಾಲೀಮು ನಡೆಸಿದರು.

ಹರಿಯಾಣ ಪಂಜಾಬ್ ಉತ್ತರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಎರಡುವರೆ ಸಾವಿರ ರೈತರು ಜಾಥಾದಲ್ಲಿ ಪಾಲ್ಗೊಂಡಿದ್ದಾರೆ.
ಕೃಷಿ ಕಾಯ್ದೆಯನ್ನು ಹಿಂಪಡೆಯುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲಿಸುವುದಿಲ್ಲ ಎಂದು ರೈತ ನಾಯಕರು ಬಿಗಿ ಪಟ್ಟು ಹಿಡಿದಿದ್ದಾರೆ.

ಈ ನಡುವೆ ಕೇಂದ್ರ ಸರ್ಕಾರ ನಾಳೆ ೮ನೇ ಸುತ್ತಿನ ಮಾತುಕತೆಯನ್ನು ರೈತ ನಾಯಕರೊಂದಿಗೆ ನಡೆಸಲು ಉದ್ದೇಶಿಸಿದೆ ಆದರೆ ಯಾವುದೇ ಕಾರಣಕ್ಕೂ ಕೃಷಿ ಕಾಯ್ದೆಯನ್ನು ಪಡೆಯುವುದಿಲ್ಲ ಎಂದು ಹೇಳಿರುವುದು ರೈತರನ್ನು ಮತ್ತಷ್ಟು ಕೆರಳಿಸುವಂತೆ ಮಾಡಿದೆ.

ಸಿಂಘು, ತಿಕ್ರಿ, ಗಾಜಿಪುರ ಸೇರಿದಂತೆ ವಿವಿಧ ಗಡಿಭಾಗಗಳಲ್ಲಿ ರೈತರು ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯ ಕಾರ್ಯಕರ್ತ ಹೋರಾಟಗಾರ ಯೋಗೇಂದ್ರ ಯಾದವ್ ಅವರು ಜನವರಿ ೨೬ ರಂದು ದೆಹಲಿಗೆ ಬೃಹತ್ ಪ್ರಮಾಣದಲ್ಲಿ ಜಾಥಾ ನಡೆಸುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ