ಕಲಬುರಗಿ, ಜು 5: ರಾಜ್ಯದ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡಲು ಕೇಂದ್ರ ಅಸಹಕಾರ ತೋರುತ್ತಿದ್ದು,ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಸಂಸದರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾ ನಿರತರನ್ನು ಪೊಲೀಸರು ಬಂಧಿಸಿದರು.
ಆಹಾರ ಭಂಡಾರದಲ್ಲಿ ಅಕ್ಕಿ ಇದ್ದರೂ ಸಹ ರಾಜ್ಯಕ್ಕೆ ಅಕ್ಕಿ ನೀಡಲು ಕೇಂದ್ರ ಸರಕಾರ ನಿರಾಕರಿಸುತ್ತಿದೆ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರದ ವಿರುದ್ಧ ಘೋಷಣೆ ಕೂಗಿದರು
ಶಿವಾನಂದ ಹೊನಗುಂಟಿ,ಈರಣ್ಣ ಝಳಕಿ,ಅಮರ ಶಿರವಾಳ,ಮಂಜುಳಾ ಪಾಟೀಲ,ಪರಶು ನಾಟಿಕರ,ಶ್ರೀಶೈಲ ಪಾಟೀಲ,ಅರ್ಶದ್ ಖಾನ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.