ಕೇಂದ್ರದ ವಿರುದ್ಧ ಟೀಕೆ ೫೦ ಟ್ವೀಟ್ ಡಿಲೀಟ್

ನವದೆಹಲಿ, ಏ.೨೫- ಕೊರೊನಾ ಸೋಂಕು ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಮಾಡಲಾದ ಟೀಕೆಗಳಿಂದ ಕೂಡಿದ ೫೦ ಟ್ವೀಟ್‌ಗಳನ್ನು ನಿನ್ನೆ ತನ್ನ ಖಾತೆಯಿಂದ ತೆಗೆದು ಹಾಕಿದೆ. ಬಹುಪಾಲು ಈ ಟ್ವೀಟ್‌ಗಳು ರಾಜಕೀಯ ನಾಯಕರಿಂದ ಹಾಕಲಾಗಿದ್ದವು. ಸದ್ಯ ಇವುಗಳನ್ನು ಟ್ವಿಟರ್ ಅಳಿಸಿ ಹಾಕಿದೆ.
ಟೀಕೆಗಳಿಂದ ಕೂಡಿದ ಸಂದೇಶಗಳನ್ನು ಅಳಿಸಿ ಹಾಕಿರುವ ಕುರಿತು ಟ್ವಿಟರ್ ಮಾತ್ರ ಈ ತನಕ ಪ್ರತಿಕ್ರಿಯೆ ನೀಡಿಲ್ಲ. ಮುಖ್ಯವಾಗಿ ಕಾಂಗ್ರೆಸ್ ನಾಯಕ, ವಕ್ತಾರ ಪವನ್ ಖೇರಾ, ಕಾಂಗ್ರೆಸ್ ಸಂಸದ ರೇವಂತ್ ರೆಡ್ಡಿ, ಪಶ್ಚಿಮ ಬಂಗಾಳ ಸಚಿವ ಮೋಲಿ ಘಾತಕ್ ಸೇರಿದಂತೆ ಹಲವರ ಟ್ವೀಟ್‌ಗಳನ್ನು ಟ್ವಿಟರ್ ಸದ್ಯ ತೆಗೆದು ಹಾಕಿದೆ. ಕುಂಭ ಮೇಳದಿಂದಲೇ ದೇಶಾದ್ಯಂತ ಸೋಂಕು ವ್ಯಾಪಿಸಲು ಕಾರಣ. ಸೋಂಕು ನಿಯಂತ್ರಣದಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಎಂದು ಬಹುಪಾಲು ಟ್ವೀಟ್ ಸಂದೇಶಗಳು ಕೂಡಿದ್ದು, ಇದನ್ನೀಗ ತೆಗೆದು ಹಾಕಲಾಗಿದೆ. ಈ ರೀತಿ ಟ್ವೀಟ್‌ಗಳನ್ನು ತೆಗೆದು ಹಾಕುವಂತೆ ಈ ಹಿಂದೆ ಕೇಂದ್ರ ಸರ್ಕಾರ ಟ್ವಿಟರ್‌ಗೆ ಒತ್ತಾಯಿಸಿತ್ತು. ಇದರ ಪರಿಣಾಮ ಸದ್ಯ ಟ್ವೀಟ್‌ಗಳನ್ನು ತೆಗೆದು ಹಾಕಲಾಗಿದೆ.