ಕೇಂದ್ರದ ರಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವರ ಪ್ರವಾಸ

ಕಲಬುರಗಿ,ನ.01:ಕೇಂದ್ರದ ನೂತನ, ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವರಾದ ಭಗವಂತ ಖೂಬಾ ಅವರು ಬೀದರದಿಂದ ಕಲಬುರಗಿ ಜಿಲ್ಲೆಯ ಚಿಂಚೋಳಿಗೆ ನವೆಂಬರ್ 2 ರಂದು ಬೆಳಿಗ್ಗೆ 9 ಗಂಟೆಗೆ ಚಿಂಚೋಳಿಗೆ ಆಗಮಿಸಿ, ಪಕ್ಷದ ಪ್ರಮುಖರಿಗೆ ಭೇಟಿ ಮಾಡುವರು.
ಅಂದು ಬೆಳಿಗ್ಗೆ 11 ಗಂಟೆಗೆ ನಂತರ ಚಿಂಚೋಳಿ ನಗರದಲ್ಲಿ ದಿವಂಗತ ಶ್ರೀ ವೈಜಿನಾಥ ಪಾಟೀಲ ಸ್ಮಾರಕ ಆವರಣದಲ್ಲಿ ಜರುಗುವ ದಿವಂಗತ ಶ್ರೀ ವೈಜಿನಾಥ ಪಾಟೀಲ ಇವರ 2ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 1 ಗಂಟೆಗೆ ಚಿಂಚೋಳಿಯಿಂದ ಬೀದರಿಗೆ ಪ್ರಯಾಣಿಸುವರು.