ಕೇಂದ್ರದ ಯೋಜನೆಯಿಂದ ರೈತರಿಗೆ ಅನುಕೂಲ

ನಾಯಕನಹಟ್ಟಿ.ಸೆ.೨೫;  ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದು ನಾಯಕನಹಟ್ಟಿ ಮಂಡಲದ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬೋಸೆರಂಗಪ್ಪ ತಿಳಿಸಿದರು.ನಾಯಕನಹಟ್ಟಿ ಪಟ್ಟಣದ ಬೋಸೆದೇವರಹಟ್ಟಿ ಗ್ರಾಮದಲ್ಲಿ ಸುದಿಗೊಷ್ಠಿಯೊಂದಿಗೆ ಮಾತನಾಡಿದ ಅವರು ದೇಶದ ಕೃಷಿ ಉತ್ಪನ್ನಕ್ಕಾಗಿ ಮಾರುಕಟ್ಟೆ ಸೃಷ್ಠಿಸುವ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಸಾಧ್ಯತೆ ಇರುವ ನೂತನ ಕೃಷಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆಯು ರೈತರಿಗೆ ಮುಕ್ತವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ಅದೇ ರೀತಿ ವ್ಯಾಪಾರಿಗಳಿಗೂ ತಮಗೆ ಬೇಕಾದ ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಖರಿದಿಸುವ ಅವಕಾಶವಾನ್ನು ಕಲ್ಪಿಸಲಾಗಿದೆ ಎಂದರು.ರೈತರ ಆರ್ಥಿಕ ಅಭಿವೃದ್ಧಿಯು ದೃಷ್ಠಿಕೊನದಿಂದ ಈ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿದೆ ಎಂದರು. ಇಂದು ದೇಶದಲ್ಲಿ ಶೇಕಡ 50 ರಷ್ಟು ಕೃಷಿಯನ್ನು ನಂಬಿ ಬದಕು ಸಾಗಿಸುತ್ತಿದ್ದಾರೆ. ದೇಶದಲ್ಲಿ 50% ರಷ್ಟು ರೈತರ ಆರ್ಥಿಕವಾಗಿ ಸದೃಢಗೊಳ್ಳದಿದ್ದರೆ ದೇಶದ ಆರ್ಥಿಕತೆ ಸದೃಢಸಾಧ್ಯವಿಲ್ಲ ಎಂಬ ನಿಟ್ಟಿನಲ್ಲಿ ರೈತರ ಪರವಾದ ಮಹತ್ತರ ಯೋಜನೆಳಗನ್ನು ಜಾರಿಗೆ ತಂದತಹ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.ಬಿಜೆಪಿ ಸರ್ಕಾರ 7 ವರ್ಷಗಳಲ್ಲಿ ಅನೇಕ ಜನಪರ ಕೆಲಸಗಳು ಮಾಡಿದ್ದಾರೆ. ಫಸಲ್ ಭೀಮ ಯೋಜನೆ, ಸೋಲಾರ್ ಮೂಲಕ ವಿದ್ಯುತ್ ಉತ್ಪಾದನೆ, ಕೃಷಿ ಮಸೂದೆಗಳ ತಿದ್ದುಪಡಿ ಹಾಗೂ ಕಿಸಾನ್ ಸಮ್ಮಾನ್ ಯೋಜನೆಯಂತಹ ಅನೇಕ ರೈತಪರ ಯೋಜನೆಗಳನ್ನು ಜಾರಿಗೆ ತಂದು ಇಂದು ದೇಶದಲ್ಲಿ ಆರ್ಥಿಕವಾಗಿ ಸದೃಢವಾಗಲು ದಿಟ್ಟ ನಿಲುವು ಕೈಗೊಳ್ಳಲಾಗಿದೆ ಎಂದರು.ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಮೂಲಕ ಮತಷ್ಟು ಬಲ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಎಂದು ತಿಳಿಸಿದರು.ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನವಾಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.Attachments area