ಕೇಂದ್ರದ ನಾಗರಿಕ ವಿಮಾನಯಾನ ರಾಜ್ಯ ಸಚಿವರ ಕಾರ್ಯಕ್ರಮ

ಕಲಬುರಗಿ,ಮಾ.14:ಕೇಂದ್ರದ ನಾಗರಿಕ ವಿಮಾನಯಾನ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ರಾಜ್ಯ ಸಚಿವರಾದ ಡಾ. ವಿ.ಕೆ. ಸಿಂಗ್ ಅವರು ಮಾರ್ಚ್ 15 ರಂದು ಬುಧವಾರ ಬೆಳಿಗ್ಗೆ 10.30 ಗಂಟೆಗೆ ಹೆಲಿಕ್ಯಾಪ್ಟರ್ ಮೂಲಕ ಕಲಬುರಗಿ ಹೆಲಿಪ್ಯಾಡ್‍ಗೆ ಅಗಮಿಸುವರು.

ಅಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದ (ಪರೀಕ್ಷಾ ವಿಭಾಗದ ಬಲಭಾಗ) ಆವರಣದಲ್ಲಿ ಹಮ್ಮಿಕೊಳ್ಳಲಾದ ಕಲಬುರಗಿ ಜಿಲ್ಲಾ ಮಟ್ಟದ ಫಲಾನುಭವಿಗಳ ಸಮ್ಮೇಳನದಲ್ಲಿ ಭಾಗವಹಿಸುವರು. ಅಂದು ಮಧ್ಯಾಹ್ನ 2.05 ಗಂಟೆಗೆ ಕಲಬುರಗಿಯಿಂದ ಹೆಲಿಪ್ಯಾಡ್ ಮೂಲಕ ವಿಜಯಪುರ ಜಿಲ್ಲೆಯ ಹಗರಿಬೊಮ್ಮನಳ್ಳಿ ಹೆಲಿಪ್ಯಾಡ್‍ಗೆ ಪ್ರಯಾಣಿಸುವರು.