ಕೇಂದ್ರದಿಂದ ಮಾಧ್ಯಮದವರ ದೂರವಾಣಿ ಕದ್ದಾಲಿಕೆ:ರಾಗಾ ಕಿಡಿ

ಲಂಡನ್,ಮಾ.೩-ಭಾರತದಲ್ಲಿ ರಾಜಕಾರಣಿಗಳು, ನ್ಯಾಯಾಧೀಶರು, ಮಾಧ್ಯಮವರ ದೂರವಾಣಿ ಕದ್ದಾಲಿಕೆ ಮಾಡುವ ಮೂಲಕ
ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ಧಾರೆ.ಭಾರತೀಯ ಪ್ರಜಾಪ್ರಭುತ್ವ ಒತ್ತಡ, ಮತ್ತು ಹಿಡಿತದಲ್ಲಿದೆ. ಭಾರತದಲ್ಲಿ ವಿರೋಧ ಪಕ್ಷದ ನಾಯಕರ ದೂರವಾಣಿ ಕದ್ದಾಲಿಕೆ ಮಾಡಲಾಗುತ್ತಿದೆ,. ಸಂಸತ್ತು , ಮುಕ್ತ ಪತ್ರಿಕಾ, ನ್ಯಾಯಾಂಗದ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೆಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಜಿ ಸಲಹೆಗಾರ ಸ್ಯಾಮ್ ಪಿತ್ರೋಡಾ ’೨೧ ನೇ ಶತಮಾನದಲ್ಲಿ ಕೇಳಲು ಕಲಿಯುವುದು’ ಎಂಬ ವಿಷಯದ ಕುರಿತು ಲಂಡನ್‌ನ ಕೇಂಬ್ರಿಡ್ಜ್ ಜಡ್ಜ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ರಾಹುಲ್ ಗಾಂಧಿ ಮಾಡಿದ ಭಾಷಣದ ಯೂಟ್ಯೂಬ್ ಲಿಂಕ್ ಅನ್ನು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ.ಅದರಲ್ಲಿ ರಾಹುಲ್ ಗಾಂಧಿ, ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನುವ ಮೊಬೈಲ್ ಫೊನ್‌ಗೆ ನುಸುಳಲು ಬಳಸಲಾಗುತ್ತಿದೆ. ದೂರವಾಣಿ ಕರೆಗಳನ್ನು ರೆಕಾರ್ಡ್ ಆಗುತ್ತಿರುವುದರಿಂದ ಫೊ?ನ್‌ನಲ್ಲಿ ಮಾತನಾಡುವಾಗ “ಎಚ್ಚರಿಕೆಯಿಂದ” ಇರುವಂತೆ ಗುಪ್ತಚರ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.ನನ್ನ ಫೊನ್‌ನಲ್ಲಿ ಪೆಗಾಸಸ್ ಸಾಪ್ಟ್ ವೇರ್ ನುಸುಳಿತ್ತು ಹೆಚ್ಚಿನ ಸಂಖ್ಯೆಯ ರಾಜಕಾರಣಿಗಳ ಫೊನ್‌ಗಳಲ್ಲಿ ಪೆಗಾಸಸ್ ಇತ್ತು. ಗುಪ್ತಚರ ಅಧಿಕಾರಿಗಳು ಕರೆ ಮಾಡಿ ನೀವು ಫೊ?ನ್‌ನಲ್ಲಿ ಏನು ಹೇಳುತ್ತಿದ್ದೀರಿ ಎಂಬುದರ ಕುರಿತು ಜಾಗರೂಕರಾಗಿರಿ ದೂರವಾಣಿ ಕರೆಗಳು ರೆಕಾರ್ಡ್ ಮಾಡುತ್ತಿದ್ದೇವೆ ಎನ್ನುವ ಸಂಗತಿಯನ್ನು ತಿಳಿಸಿದ್ಧಾರೆ ಎಂದಿದ್ದಾರೆ.ಕಳೆದ ವರ್ಷ ಆಗಸ್ಟ್‌ನಲ್ಲಿ, ಸರ್ಕಾರವು ದೂರವಾಣಿ ಕದ್ದಾಲಿಕೆಗೆ ಪೆಗಾಸಸ್ ಅನ್ನು ಬಳಸುತ್ತಿದೆ ಎಂಬ ಆರೋಪಗಳನ್ನು ಪರಿಶೀಲಿಸಲು ರಚಿಸಲಾದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿ, ಪರೀಕ್ಷಿಸಿದ ೨೯ ಮೊಬೈಲ್ ಫೊನ್‌ಗಳಲ್ಲಿ ಸ್ಪೈವೇರ್ ಕಂಡುಬಂದಿಲ್ಲ, ಆದರೆ ಲೋಪ ಇರುವುದು ಕಂಡುಬಂದಿದೆ ಎಂದು ತೀರ್ಮಾನಿಸಿದೆ ಎಂದು ಹೇಳಿತ್ತು ಎಂದುಹೇಳಿದ್ಧಾರೆ. ಐದು ಮೊಬೈಲ್ ಫೊ?ನ್‌ಗಳಲ್ಲಿ.“ತಾಂತ್ರಿಕ ಸಮಿತಿ ವರದಿ ಬಗ್ಗೆ ನಮಗೆ ಕಾಳಜಿ ಇದೆ… ೨೯ ಫೊನ್‌ಗಳನ್ನು ನೀಡಲಾಗಿದ್ದು, ಐದು ಫೊನ್‌ಗಳಲ್ಲಿ ಕೆಲವು ಲೋಪ ಕಂಡುಬಂದಿವೆ ಆದರೆ ತಾಂತ್ರಿಕ ಸಮಿತಿ ಪೆಗಾಸಸ್ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದಿದ್ದಾರೆ.”ಸಂವಿಧಾನದಲ್ಲಿ, ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆ ಮತ್ತು ಆ ಒಕ್ಕೂಟಕ್ಕೆ ಮಾತುಕತೆ ಮತ್ತು ಸಂಭಾಷಣೆಯ ಅಗತ್ಯವಿದೆ. ಮಾತುಕತೆಯೇ ದಾಳಿ ಮತ್ತು ಬೆದರಿಕೆಗೆ ಒಳಗಾಗಿದೆ. ಸಂಸತ್ ಭವನದ ಮುಂದೆ ತೆಗೆದ ಚಿತ್ರ ನೀವು ನೋಡಬಹುದು. ವಿರೋಧ ಪಕ್ಷದ ನಾಯಕರು ಕೆಲವು ವಿಷಯಗಳ ಬಗ್ಗೆ ಮಾತನಾಡುತ್ತಾ ನಿಂತಿದ್ದೇವೆ ಮತ್ತು ನಮ್ಮನ್ನು ಜೈಲಿಗೆ ಹಾಕಲಾಯಿತು ಎಂದು ಹೇಳಿದ್ದಾರೆ.