ಕೇಂದ್ರದಿಂದ ಮಕ್ಕಳ ಚಿಕಿತ್ಸೆಗೆ ಮಾರ್ಗಸೂಚಿ

ನವದೆಹಲಿ, ಜೂ.೧೦-ಮೂರನೇ ಅಲೆಯ ಸೋಂಕು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ, ಕೊರೊನಾ ತಗುಲಿದ ಮಕ್ಕಳ ಚಿಕಿತ್ಸೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಕ್ಕಳಿಗಾಗಿಯೇ ರಚಿಸಲಾಗಿರುವ ಕೋವಿಡ್-೧೯ ನಿರ್ವಹಣೆ ಸಮಗ್ರ ಮಾರ್ಗಸೂಚಿಯಲ್ಲಿ ಮಕ್ಕಳಿಗೆ ರೋಗ ನಿರೋಧ ರೆಮಿಡಿಸಿವಿರ್ ಔಷಧಿ ಶಿಫಾರಸು ಮಾಡಿಲ್ಲ.ಮಧ್ಯಮ ತೀವ್ರತೆ ಹಾಗೂ ಸೋಂಕಿನಿಂದ ಗಂಭೀರವಾಗಿ ಆಸ್ಪತ್ರೆಯಲ್ಲಿ ಬಳಲುತ್ತಿರುವ ರೋಗಿಗಳಿಗೆ ಸ್ಟೆರಾಯ್ಡ್ ಬಳಸಲು ಅನುಮತಿ ನೀಡಲಾಗಿದೆ.
೧೮ ವರ್ಷದೊಳಗಿನ ಮಕ್ಕಳಲ್ಲಿ ರೆಮಿಡಿಸಿವಿರ್ ಸುರಕ್ಷಿತವಲ್ಲ ಎಂದು ಅಂಕಿ ಅಂಶದಿಂದ ದೃಢಪಟ್ಟಿದೆ. ಹೀಗಾಗಿ ಈ ಔಷಧಿಯನ್ನು ಶಿಫಾರಸು ಮಾಡಿಲ್ಲ ಎಂದು ಮಾರ್ಗಸೂಚಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಡಪಡಿಸಿದೆ.
ಕೇವಲ ಆರು ನಿಮಿಷಗಳಲ್ಲಿ ೧೨ ವರ್ಷ ಮೇಲ್ಪಟ್ಟ ಮಕ್ಕಳಿಗೆ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು. ಆತ ಮತ್ತು ಅವಳ ಕೈನ ಬೆರಳಿಗೆ ಆಕ್ಸಿಮೀಟರ್ ಅಳವಡಿಸಿ ಆರು ನಿಮಿಷಗಳವರಗೆ ಮುಂದರವೆಸಬೇಕು. ಆಕ್ಸಿಜನ್ ಪ್ರಮಾಣ ೯೪ಕ್ಕಿಂತ ಅಥವಾ ಸಾಮಾನ್ಯವಾಗಿ ಅಂದರೆ ಶೇ. ೩ ರಿಂದ ೫ ರಷ್ಟು ಇಳಿಕೆಯಾಗಿ ಉಸಿರಾಟಕ್ಕೆ ತೊಂದರೆಯಾದರೆ ಈ ಆರು ನಿಮಿಷಗಳ ನಂತರ ಕೋವಿಡ್ ಪರೀಕ್ಷೆ ಮಾಡಬೇಕು. ಪರೀಕ್ಷೆ ನಡೆಸಿದ ಬಳಿಕ ವರದಿಯಲ್ಲಿ ಪಾಸಿಟಿವ್ ಬಂದರೆ ಆಗ ಅಂತಹ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಬೇಕೆಂದು ಸೂಚಿಸಲಾಗಿದೆ.
ಆದರೆ ಅಸ್ತಮಾ ನಿಯಂತ್ರಣಕ್ಕೆ ಬಾರದ ರೋಗಿಗಳಿಗೆ ಈ ಪರೀಕ್ಷೆಯನ್ನು ಶಿಫಾರಸು ಮಾಡಲಾಗಿಲ್ಲ. ತೀವ್ರ ಜ್ವರ ಕಾಣಿಸಿಕೊಂಡ ಪ್ರಕರಣಗಳಲ್ಲಿ ಆಕ್ಸಿಜನ್ ಚಿಕಿತ್ಸೆಯನ್ನು ತಕ್ಷಣ ಕೊಡಬೇಕು ಅಗತ್ಯಬಿದ್ದರೆ ಅವರಿಗೆ ಸ್ಟೆರಾಯ್ಡ್ ನೀಡಬಹುದು ಎಂದು ಹೇಳಿದೆ.
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಧರಿಸಬೇಕಾಗಿಲ್ಲ. ಆದರೆ ೬ರಿಂದ ೧೧ ವರ್ಷದ ಮಕ್ಕಳಿಗೆ ತಮ್ಮ ಪೋಷಕರ ಉಸ್ತುವಾರಿಯೊಂದಿಗೆ ಮಾಸ್ಕ್ ಧರಿಸಬೇಕಾಗಿದೆ. ಕೋವಿಡ್ ಸೋಂಕಿತ ಮಕ್ಕಳಿಗೆ ವಿವಿಧ ಬಗೆಯ ಪರೀಕ್ಷೆ ನಡೆಸಲು ಸೂಚಿಸಿದ್ದರೆ ಸಿ.ಟಿ.ಸ್ಕ್ಯಾನ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕಪ್ಪು ಶಿಲೀಂದ್ರವಿರುವ ರೋಗಿಗಳಿಗೆ ವೈದ್ಯರು ಯಾವುದೇ ವರದಿಗಳಿಗೆ ಕಾಯದೆ ತುರ್ತಾಗಿ ಚಿಕಿತ್ಸೆಗಳನ್ನು ನೀಡುವಂತೆಯೂ ಶಿಫಾರಸು ಮಾಡಲಾಗಿದೆ.