ಚಿಕ್ಕಬಳ್ಳಾಪುರ.ಜು೭:ರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ರವರ ನೇತೃತ್ವದ ಸರ್ಕಾರದ ಆಡಳಿತ ನೀತಿ ಜನ ವಿರೋಧಿ ಆಗಿದ್ದು ಜನತೆ ಕೇಂದ್ರ ಸರ್ಕಾರದ ಆಡಳಿತ ನೀತಿಯ ವಿರುದ್ಧ ಭಾವನೆ ಕಳೆದಿದ್ದು ೨೦೨೪ರಲ್ಲಿ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಡಾಕ್ಟರ್ ಎಂ ವೀರಪ್ಪ ಮೊಯ್ಲಿ ತಿಳಿಸಿದರು.
ಅವರು ನಗರದ ವಾಪಸಂದ್ರ ಬಡಾವಣೆಯಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮಣಿಪುರದಲ್ಲಿ ಹಲವಾರು ತಿಂಗಳುಗಳಿಂದ ನಡೆಯುತ್ತಿದ್ದರು ಒಮ್ಮೆಯಾದರೂ ಸಹ ನರೇಂದ್ರ ಮೋದಿ ರವರು ಅದರ ಬಗ್ಗೆ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಪ್ರದೇಶಕ್ಕೆ ಭೇಟಿ ನೀಡಲಿಲ್ಲ ಇದು ಅವರ ನೀತಿಯನ್ನು ಎತ್ತಿ ತೋರಿಸುತ್ತದೆ ರಾಷ್ಟ್ರದಲ್ಲಿ ಇವರಿಗೆ ಶಾಂತಿ ವಾತಾವರಣ ಬೇಕಾಗಿಲ್ಲ ಎಂದು ನೇರವಾಗಿ ಆರೋಪಿಸಿದರು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಹಲವಾರು ಸ್ಥಾನಗಳು ಖಾಲಿ ಇದೆ ಈ ಹುದ್ದೆಗಳಿಗೆ ಹಿಂದಿನ ಸರ್ಕಾರ ನೇಮಕಾತಿಯನ್ನು ಮಾಡದೆ ಇರುವುದು ಇಲ್ಲಿನ ಕ್ಷಣ ಕ್ಷೇತ್ರದಲ್ಲಿ ಸಾಧನೆ ಕುಂಠಿತವಾಗಲು ಕಾರಣವಾಗಿದೆ ಎಂದರು.
ಚಿಕ್ಕಬಳ್ಳಾಪುರ ಲೋಕಸಭಾ ಸದಸ್ಯತ್ವದ ಸ್ಥಾನಕ್ಕೆ ತಾವು ಸ್ಪರ್ಧಿಸುವ ಬಗ್ಗೆ ವಿವರಣೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೇನೆ ಕಾಂಗ್ರೆಸ್ ಪಕ್ಷ ಯಾರೊಬ್ಬರ ವೈಯಕ್ತಿಕ ಸ್ವತ್ತು ಅಲ್ಲ ಪಕ್ಷ ಟಿಕೆಟ್ ನೀಡಿದರೆ ದಿನಗಳ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದರೆ ಸದ್ಯದ ವಾತಾವರಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಉತ್ತಮವಾದ ಅವಕಾಶ ಇದೆ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಮತ್ತು ಕೇಂದ್ರದಲ್ಲಿ ಬಿಜೆಪಿ ಪಕ್ಷವನ್ನು ದೇಶದ ಜನತೆ ತಿರಸ್ಕರಿಸುವರು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ನಂದಿ ಎಂ. ಆಂಜನಪ್ಪ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಆಕಾಂಕ್ಷಿಯಾಗಿದ್ದೆ ಆಗ ಗೌರಿಬಿದನೂರು ಶಾಸಕರಾಗಿದ್ದ ಎನ್ ಹೆಚ್ ಶಿವಶಂಕರ್ ರೆಡ್ಡಿ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದ ಕೆಏನ್ ಕೇಶವ ರೆಡ್ಡಿ ರವರು ನೀವು ಈಗ ತ್ಯಾಗ ಮಾಡಬೇಕು ರಕ್ಷಾ ರಾಮಯ್ಯ ರವರಿಗೆ ಅವಕಾಶ ಕಲ್ಪಿಸಿ ಕೊಡಬೇಕು ಎಂದು ನನ್ನನ್ನು ಕೋರಿದರು ಆಗ ಅವರಿಬ್ಬರ ಮಾತನ್ನು ಒಪ್ಪಿಕೊಂಡು ಸಿದ್ದರಾಮಯ್ಯ ರವರ ಬಳಿ ಹೋಗಿ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಕೋರಿದೆ ಆಗ ಅವರು ನಾನು ರಕ್ಷಾ ರಾಮಯ್ಯ ಅವರನ್ನು ಮತ್ತು ಅವರ ತಂದೆ ಎಮ್ ಆರ್ ಸೀತಾರಾಮ್ ಅವರನ್ನು ಕರೆದು ಕೇಳಿದ್ದೇನೆ ಅವರು ಬೇಡ ಎಂದಿದ್ದಾರೆ ನೀವು ಇನ್ನೂ ಬೇರೆ ಯಾರಾದರೂ ಅಭ್ಯರ್ಥಿಯನ್ನು ಹುಡುಕಿ ಎಂದು ತಿಳಿಸಿದರು ಇದು ಸತ್ಯವಾದ ವಿಷಯ ನಾನು ನನ್ನ ಜೀವನದಲ್ಲಿ ಎಂದು ಸುಳ್ಳನ್ನು ಹೇಳಿದವನಲ್ಲ ಎಂದರು.
ಮಾಜಿ ಶಾಸಕರುಗಳಾದ ಎಸ್ ಎಂ ಮುನಿಯಪ್ಪ ಎಂ ಶಿವಾನಂದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಂದಿ ಎಂ ಆಂಜನಪ್ಪ ನಗರ ಸಭೆ ನಗರಸಭೆ ಹಿರಿಯ ಸದಸ್ಯ ಎಸ್‌ಎಂ. ರಫಿಕ್ ಮುಖಂಡರುಗಳಾದ ನಾಯನಹಳ್ಳಿ ನಾರಾಯಣಸ್ವಾಮಿ ಅಡ್ಡಗಲ್ ಶ್ರೀಧರ್ ಲಾಯರ್ ನಾರಾಯಣಸ್ವಾಮಿ ಕಣಜನಹಳ್ಳಿ ಜಯರಾಮ್ ಒಳಗೊಂಡಂತೆ ಮತ್ತೆ ಇತರರು ಹಾಜರಿದ್ದರು