ಕೆ.ಹೆಚ್.ಓಬಳೇಶಪ್ಪ ನಿಧನಕ್ಕೆ ಎಸ್ಸೆಸ್, ಎಸ್ಸೆಸ್ಸೆಂ ಸಂತಾಪ

ದಾವಣಗೆರೆ.ಮೇ.೨೦:  ಜಿಲ್ಲಾ ಪಂಚಾಯಿತಿ ಸದಸ್ಯರು, ಕಾಂಗ್ರೆಸ್ ಪಕ್ಷದ ಎಸ್.ಟಿ.ಘಟಕದ ಜಿಲ್ಲಾಧ್ಯಕ್ಷರೂ ಆದ ಕೆ.ಹೆಚ್.ಓಬಳೇಶಪ್ಪನವರ ನಿಧನಕ್ಕೆ  ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು, ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಸರ್ಕಾರಿ ಅಧಿಕಾರಿಯಾಗಿದ್ದ ಓಬಳಪ್ಪನವರು ಸ್ವಯಂ ನಿವೃತ್ತಿ ಪಡೆದು ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆಯುವ ಮೂಲಕ 2016ರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಲೋಕಿಕೆರೆ ಕ್ಷೇತ್ರದಿಂದ ಸ್ಪರ್ಧಿಸಿ ಅಭೂತಪೂರ್ವ ವಿಜಯವನ್ನು ಸಾಧಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದು, ಪಕ್ಷದ ಸಂಘಟನೆಯಲ್ಲೂ ತಮ್ಮನ್ನು ತೊಡಗಿಸಿಕೊಂಡು ಪಕ್ಷದ ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ಕರ‍್ಯನಿರ್ವಹಿಸುತ್ತಿದ್ದರು ಎಂದು ತಮ್ಮ ಸಂತಾಪದಲ್ಲಿ ಅವರ ಗುಣಗಾನ ಮಾಡಿದ್ದಾರೆ.ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ನಿಧನದಿಂದ ಅವರ ಕುಟುಂಬ-ಸ್ನೇಹ ಬಳಗ ಹಾಗೂ ಕರ‍್ಯಕರ್ತರಿಗೆ ಆಗಿರುವ ನೋವನ್ನು ತಡೆಗಟ್ಟಲು ಆ ಭಗವಂತನ್ನು ಶಕ್ತಿ ನೀಡಲೆಂದು ಅವರುಗಳು ಪ್ರಾರ್ಥಿಸಿದ್ದಾರೆ.