
ಕೋಲಾರ,ಏ,೩- ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ವರ್ಧಿಸಲು ಕೆ.ಪಿ.ಸಿ.ಸಿ. ಟಿಕೆಟ್ ನೀಡುವುದಾಗಿ ಮೊದಲ ಪಟ್ಟಿಯಲ್ಲಿ ಘೋಷಿಸಿರುವುದಕ್ಕೆ ಸ್ಥಳೀಯ ಕಾಂಗ್ರೇಸ್ ಮುಖಂಡರು ಅಪಸ್ವರದೊಂದಿಗೆ ತೀವ್ರ ಅಸಮಾಧಾನ ವ್ಯಕ್ತ ಪಡೆಸಿದ್ದಾರೆ. ಶುಕ್ರವಾರ ಗುಪ್ತವಾಗಿ ಕ್ಷೇತ್ರದ ಮುಖಂಡರು ಸಭೆ ಸೇರಿ ಹೊರಗಿನವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದಾರೆ.
ದೊಡ್ಡಬಳ್ಳಾಪುರ ವಿಧಾನ ಸಭಾ ಕೇಂದ್ರದಲ್ಲಿ ಹಲವಾರು ಮುಖಂಡರು ಅಕಾಂಕ್ಷಿಗಳಾಗಿದ್ದು ಸುಮಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡು ಶ್ರಮ ಪಟ್ಟಿದ್ದಾರೆ. ಅದರೆ ಕೋಲಾರ ಜಿಲ್ಲೆಯವರಾದಕೆ.ಹೆಚ್.ಮುನಿಯಪ್ಪ ಅವರು ಕಳೆದ ೭ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಕಾಂಗ್ರೇಸ್ ಪಕ್ಷದಿಂದ ಗೆಲವು ಸಾಧಿಸಿದವರು. ಅವರು ಕೇಂದ್ರದಿಂದ ರಾಜ್ಯದ ರಾಜಕಾರಣಕ್ಕೆ ಬರುವ ಹಾಗಿದ್ದರೆ ಕೋಲಾರ ವಿಧಾನ ಸಭಾ ಕ್ಷೇತ್ರದ ಯಾವೂದಾದರೂ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ಸ್ವರ್ಧಿಸಿದರೆ ಅವರಿಗೂ ಅನುವುಂಟಾಗುವುದು,
ಕಳೆದ ೩೦ ವರ್ಷಗಳಿಂದ ಅವರ ಸಾಧನೆಗಳನ್ನು ಜನರ ಮುಂದಿಟ್ಟು ಮತವನ್ನು ಯಾಚಿಸಬಹುದಾಗಿತ್ತು, ಅದರೆ ದೊಡ್ಡಬಳ್ಳಾಪುರದಲ್ಲಿ ಅವರ ಸಾಧನೆ ಶೂನ್ಯ ಹಾಗಾಗಿ ಮುನಿಯಪ್ಪ ಅವರು ವಿಧಾನಸಭಾ ಕ್ಷೇತ್ರದ ಟಿಕೆಟ್ ಸ್ಥಳೀಯರಿಗೆ ಬಿಟ್ಟು ಕೊಟ್ಟರೇ ಉತ್ತಮ ಎಂಬ ಕಿವಿ ಮಾತು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ಖಾದಿಭವನದಲ್ಲಿ ಶುಕ್ರವಾರ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್ ನೇತ್ರತ್ವದಲ್ಲಿ ಗುಪ್ತವಾಗಿ ಕಾಂಗ್ರೇಸ್ ಮುಖಂಡರು ಸಭೆ ಸೇರಿದ್ದರು, ದೊಡ್ಡಬಳ್ಳಾಪುರದಲ್ಲಿ ಕಳೆದ ೧೦ ವರ್ಷಗಳಿಂದ ಕಾಂಗ್ರೇಸ್ ಶಾಸಕರು ಆಯ್ಕೆಯಾಗಿರಲಿಲ್ಲ. ಈ ಮತದಾರರು ಬಿಜೆಪಿಯ ಆಡಳಿತ ವಿರುದ್ದ ಬೇಸತ್ತಿದ್ದು ರಾಜ್ಯದಲ್ಲಿ ಬದಲಾವಣೆ ಬಯಸಿರುವ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಮಾಜಿ ಸಂಸದರಾದ ಕೆ.ಹೆಚ್.ಮುನಿಯಪ್ಪ ಅವರು ದೊಡ್ಡಪುರ ಮೀಸಲು ಕ್ಷೇತ್ರದ ಹಿನ್ನಲೆಯಲ್ಲಿ ಅವರಿಗೆ ಕೆ.ಪಿ.ಸಿ.ಸಿ. ಟಕೆಟ್ ಘೋಷಣೆ ಮಾಡಿದೆ.
ಅದರೆ ಹೊರಗಿನವರಿಗೆ ಮತ ಹಾಕಲು ಮತದಾರರಿಗೆ ಇಷ್ಟವಿರುವುದಿಲ್ಲ, ಕಾಂಗ್ರೇಸ್ ಮುಖಂಡರಿಗೂ ಕೆಲಸ ಮಾಡಲು ಅಸಮಾಧಾನದಿಂದಲೇ ಮಾಡ ಬೇಕಾಗಿದೆ. ಅದರ ಬದಲು ಕಾಂಗ್ರೇಸ್ ಪಕ್ಷಕ್ಕೆ ಕಳೆದ ೧೦ ವರ್ಷದಿಂದ ದುಡಿದ ಆಕಾಂಕ್ಷಿಗಳ ಪೈಕಿ ಯಾರಿಗಾದರೂ ಟಿಕೆಟ್ ನೀಡಲಿ, ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೇಸ್ ಅಭ್ಯರ್ಥಿಯನ್ನು ಗೆಲ್ಲಿಸೋಣಾ ಎಂಬ ತೀಮಾನಕ್ಕೆ ಬಂದಿದ್ದಾರೆ.
ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ಮನವಿಯನ್ನು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳಿ ನಿಯೋಗ ತೆರಳಿ ಮನವಿ ಪತ್ರವನ್ನು ಸಲ್ಲಿಸಲು ನಿರ್ಧಾರಿಸಿದ್ದಾರೆ ಎಂದು ಕಾಂಗ್ರೇಸ್ ಮೂಲಗಳಿಂದ ವರದಿಯಾಗಿದೆ.