(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.16″:ಪರೀಕ್ಷೆಯಲ್ಲಿ (ಬೆಸ್ಟ್) ಬಳ್ಳಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಉತ್ತಮ ಱ್ಯಾಂಕುಗಳನ್ನು ಪಡೆದುಕೊಂಡಿದ್ದು. ಇಂಜನೀಯರಿಂಗ್ ವಿಭಾಗದಲ್ಲಿ ಸೌಮ್ಯ ಭಾರತಿ ರಾಜ್ಯಕ್ಕೆ 596ನೇ ಱ್ಯಾಂಕ್, ಹಾರಿಕಾ ಎಸ್. 760ನೇ ಱ್ಯಾಂಕ್, ಅಕ್ಷತಾ ಎಂ.ವಿ 1191ನೇ ಱ್ಯಾಂಕ್ , ಮೇಘ ಕೆ 2227 ನೇ ,ನಯನಾ ವೈ.ಎನ್ 2077 ಹರೀಶ್ ಸಜ್ಜನ್ 2883 ರ್ಯಾಂಕ್ 5000 ಱ್ಯಾಂಕ್ ಒಳಗೆ 40 ವಿದ್ಯಾರ್ಥಿಗಳು, 10000 ಒಳಗೆ 97 ವಿದ್ಯಾರ್ಥಿಗಳು, 20000 ಒಳಗೆ 117 ವಿದ್ಯಾರ್ಥಿಗಳು ಱ್ಯಾಂಕ್ ಪಡೆದಿದ್ದಾರೆ. ಎಂದು ಕಾಲೇಜಿನ ಪ್ರಾಚಾರ್ಯ ಕೆ. ವೆಂಕಟೇಶ್ವರರಾವ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಬೆಸ್ಟ್ ಸಂಸ್ಥೆಯ ಅಧ್ಯಕ್ಷ ಕೋನಂಕಿ ರಾಮಪ್ಪನವರು ಹಾಗೂ ಉಪಾಧ್ಯಕ್ಷ ಕೋನಂಕಿ ತಿಲಕ್ ಕುಮಾರ್, ಕಾರ್ಯದರ್ಶಿಮನ್ನೆ ಶ್ರೀನಿವಾಸುಲು, ಕಾಲೇಜು ಪ್ರಾಚಾರ್ಯ ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯ ಜಿ. ಶ್ರೀನಿವಾಸರೆಡ್ಡಿ ಮತ್ತು ಸಿಬ್ಬಂದಿವರ್ಗದವರು ಶ್ಲಾಘಿಸಿದ್ದಾರೆ.