ಕೆ-ಸೆಟ್‍ನಲ್ಲಿ ಗುವಿಗುದ ಪ್ರಾಣಿಶಾಸ್ತ್ರ ವಿಭಾಗದ 16 ಕ್ಕೂ ಅಧಿಕ ವಿದ್ಯಾರ್ಥಿಗಳ ತೇರ್ಗಡೆ

ಕಲಬುರಗಿ:ಜ.13:2019-20ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) ಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದಿಂದ ಸುಮಾರು 16ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿ ವಿಶ್ವವಿದ್ಯಾಲಯದಲ್ಲಿ ದಾಖಲೆಯನ್ನು ಸೃಷ್ಟಿಮಾಡಿದ್ದಾರೆ.

ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಕೆ. ವಿಜಯಕುಮಾರ ಅವರ ಸೂಕ್ತ ಮಾರ್ಗದರ್ಶನ ದಲ್ಲಿ ನಾವು ಈ ಪರೀಕ್ಷೆಯನ್ನು ಪಾಸಾಗಲು ಅನುಕೂಲವಾಯಿತೆಂದು, ತೇರ್ಗಡೆಯಾದ ವಿದ್ಯಾರ್ಥಿಗಳು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು. ಈ ವಿಚಾರವಾಗಿ ಪ್ರಾಣಿಶಾಸ್ತ್ರವಿಭಾಗದ ಡಾರ್ವಿನ ಸಭಾಂಗಣದಲ್ಲಿ ದಿನಾಂಕ : 12-01-2021 ರಂದು ಬೆಳಿಗ್ಗೆ 10.30 ಗಂಟೆಗೆ ಕೆಸೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಪ್ರಭಾರ ಕುಲಪತಿಗಳಾದ ಪ್ರೊ. ಚಂದ್ರಕಾಂತ ಯಾತನೂರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಇಚಿಣದಿನ ಯುವಕರು ಮನಸ್ಸು ಮಾಡಿದ್ದಲ್ಲಿ ಇಂತಹ ಪರೀಕ್ಷೆಗಳನ್ನು ಎದುರಿಸಬಲ್ಲರು ಮತ್ತು ಕಬ್ಬಿಣ ಕಡಲೆಯಂತಿದ್ದ ಪರೀಕ್ಷೆಗಳನ್ನು ಸಹ ಪಾಸಾಗಬಹುದು ಎಂದು ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದು ಕೊಟ್ಟ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವುದರ ಮುಖಾಂತರ ಅವರ ಭವಿಷ್ಯಕ್ಕೆ ಶುಭ ಹಾರೈಸಿದರು.

ಸಮಾರಂಭದಲ್ಲಿ ವಿದ್ಯಾರ್ಥಿಗಳಾದ ಅಂಬರೀಷ, ಅನೀತಾ. ಹೆಚ್., ಐಶ್ವರ್ಯ. ಕೆ.ಎಸ್., ಗಿರಿಜಾ, ಗೋಪಾಲಕೃಷ್ಣ, ಕರುಣಾ ಇಂಗಿನ್, ಮಧುಮತಿ, ಪ್ರಶಾಂತ ವಿ., ರಾಜೇಶ, ಪ್ರೇಮಸಾಗರ, ಸ್ವಾತಿ ಕೊರಬಾನ, ವಿಶ್ವಜೀತ.ಡಿ., ಪೂಜಾ, ವಿಜಯಲಕ್ಷ್ಮೀ, ಫರೇಹಾ, ರಾಜ. ಹೆಚ್. ಇವರಿಗೆ ಪ್ರೋತ್ಸಾಸಿ ನೆನಪಿನ ಕಾಣಿಕೆಯನ್ನು ನೀಡಿ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಭಾರ ಕುಲಸಚಿವರಾದ ಸಂಜೀವಕುಮಾರ ಎಂ., ವಿತ್ತಾಧಿಕಾರಿಗಳಾದ ವಿಜಯ ಭೂತಪೂರ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳಾದ ಪ್ರೊ. ಕೆ. ಸಿದ್ಧಪ್ಪ, ರಸಾಯನ ಶಾಸ್ತ್ರ ವಿಭಾಗದ ಎ. ವೆಂಕಟರಮಣ, ಎಮಿರೆಟಸ್ ಪ್ರಾಧ್ಯಾಪಕರಾದ ಆರ್.ಎಸ್. ಕುಲಕರ್ಣಿಯವರು ಹಾಗೂ ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ ಕೆ. ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಕು.ನಿಶಿತಾ ಸ್ವಾಗತಿಸಿದರು, ಕಾರ್ಯಕ್ರಮವನ್ನು ಡಾ. ಕಸೀಮ್ ಫಾತಿಮಾ ಹಾಗೂ ಕು.ಪುಷ್ಪಲತಾ ನಿರ್ವಹಣೆ ಮಾಡಿದರು.

ಅತಿಥಿ ಉಪನ್ಯಾಸಕರಾದ ಡಾ. ಪೃಥ್ವಿರಾಜ ಬೆಡ್ಜರಗಿಯವರು ವಂದನಾರ್ಪಣೆ ಮಾಡಿದರು.