ಕೆ ಸಿ ಇ ಟಿ ಯಲ್ಲಿ ಸಿದ್ಧಗಂಗಾ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

ಸಂಜೆವಾಣಿ ವಾರ್ತೆ

ದಾವಣಗೆರೆ. ಜೂ.೩;2024 -25 ನೇ ಸಾಲಿನ ಕೆ ಸಿಇ ಟಿ ಫಲಿತಾಂಶ ಪ್ರಕಟಿಸಿದ್ದು ದಾವಣಗೆರೆಯ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ನೀಡಿ ಅಮೋಘ ಸಾಧನೆ ಗೈದಿದ್ದಾರೆ.ಸಚಿನ್ ರಮೇಶ್ ಮಳಗಿ ಕೃಷಿ ವಿಜ್ಞಾನ ವಿಭಾಗದಲ್ಲಿ 16ನೇ ರ್‍ಯಾಂಕ್ ಪಡೆದರೆ ಸಂಜನಾ ರಾಮಪ್ಪ ಬಕ್ರಿ , ಸಾಗರ್ ಎನ್ ಎಂ ,ತರನುಂ ಸುಲ್ತಾನ ಕ್ರಮವಾಗಿ 295 ,502, 949ನೇ ರ್‍ಯಾಂಕ್ ಪಡೆದು ಸಂಸ್ಥೆಗೆ ಪೋಷಕರಿಗೆ ಕೀರ್ತಿ ತಂದಿರುತ್ತಾರೆ.ಪಶು ವೈದ್ಯಕೀಯ ವಿಭಾಗದಲ್ಲಿ ಸಂಜಯ್ ಜೆ ಆರ್ 134ನೇ ರ‍್ಯಾಂಕ್ ಹೇಮಂತ್ ಪಿ 379ನೇ ರ್‍ಯಾಂಕ್, ಹೇಮಂತ್ ಟಿ ಆರ್ 539ನೇ ರ‍್ಯಾಂಕ್ ಶ್ರೀಕಾಂತ್ ಹಾವೇರಿ 880 ನೇ ರ‍್ಯಾಂಕ್ ಪಡೆದು ಅದ್ಭುತ ಸಾಧನೆ ಮಾಡಿರುತ್ತಾರೆ. ಪಶು ವೈದ್ಯಕೀಯ ಕೃಷಿ ವಿಜ್ಞಾನ ತೋಟಗಾರಿಕೆ ಹಾಗೂ ಇಂಜಿನಿಯರಿಂಗ್ ವಿಭಾಗಗಳಿಗೆ ಕಾಲೇಜಿನಿಂದ 48 ವಿದ್ಯಾರ್ಥಿಗಳು 3000 ದೊಳಗೆ ರ್‍ಯಾಂಕ್ ಪಡೆದು ಆಯ್ಕೆಯಾಗಿದ್ದಾರಲ್ಲದೆ 5000 ಒಳಗಿನ ರ್‍ಯಾಂಕ್ ನವರು ಒಟ್ಟು 63 ಜನ ವಿದ್ಯಾರ್ಥಿಗಳು ಇರುತ್ತಾರೆ. ಹತ್ತು ಸಾವಿರದ ಒಳಗೆ ಒಟ್ಟು 109 ವಿದ್ಯಾರ್ಥಿಗಳು ರ್‍ಯಾಂಕ್ ಪಡೆದಿದ್ದು ಕಾಲೇಜಿನ ಕೀರ್ತಿ ಕಿರೀಟಕ್ಕೆ ತುರಾಯಿ ಮೂಡಿಸಿದ್ದಾರೆ.  ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಯನ್ನು ಅಭಿಮಾನ ಹಾಗೂ ಗೌರವದೊಂದಿಗೆ ಅಭಿನಂದಿಸಿದ ಸಂಸ್ಥೆಯ ಮುಖ್ಯಸ್ಥರಾದ ಡಾ. ಜಸ್ಟಿನ್ ಡಿಸೌಜಾ ರವರು ಈ ಎಲ್ಲಾ ಮಕ್ಕಳ ಮುಂದಿನ ವೃತ್ತಿ ಶಿಕ್ಷಣದಲ್ಲಿ ಅವರ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಎಂದು ಹಾರೈಸಿದರು. ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಯನ್ನು ಹೃದಯಪೂರ್ವಕವಾಗಿ ಕೊಂಡಾಡಿ ಅಭಿನಂದಿಸಿದ ಪದವಿಪೂರ್ವ ಕಾಲೇಜಿನ ನಿರ್ದೇಶಕರಾದ ಡಾಕ್ಟರ್ ಜಯಂತ್ ಡಿ ಎಸ್, ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಹೇಮಂತ್ ಡಿ ಎಸ್ ಹಾಗೂ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಡಿ ಎಸ್ ರವರು ಶುಭಕೋರಿದರು. ಕಾಲೇಜಿನ ಪ್ರಾಚಾರ್ಯರು , ಉಪನ್ಯಾಸಕರು ಹಾಗೂ  ಬೋಧಕೇತರ ಸಿಬ್ಬಂದಿ, ಅದ್ಭುತ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಶುಭ ಹಾರೈಸಿದರು.