ಕೆ.ಶ್ರೀಮತಿಗೆ ಇಂಡಿಯನ್ ಅಚೀವರ್ಸ್ ಅವಾರ್ಡ್


ಚಿತ್ರದುರ್ಗ,ಡಿ.4; ನ್ಯೂಡೆಲ್ಲಿಯ ಇಂಡಿಯನ್ ಅಚೀವರ್ಸ್ ಫೋರಂ ನೀಡುವ “ಇಂಡಿಯನ್ ಅಚೀವರ್ಸ್ ಅವಾರ್ಡ್‍ಗೆ ಹಿರಿಯೂರಿನ ಜವಾಹರ್ ನವೋದಯ ವಿದ್ಯಾಲಯದ ಉಪಪ್ರಾಂಶುಪಾಲರಾದ ಕೆ.ಶ್ರೀಮತಿ ಭಾಜನರಾಗಿದ್ದಾರೆ.ಇಂಗ್ಲೀಷ್ ಉಪನ್ಯಾಸಕರಾದ ಇವರು ಮಧ್ಯಪ್ರದೇಶ, ಕರ್ನಾಟಕದ ಕೋಲಾರ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಉಡುವಳ್ಳಿ ನವೋದಯ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು ಮಕ್ಕಳ ಶಿಕ್ಷಣ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕಲಿಸುವಲ್ಲಿ ಹಾಗೂ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ವಿಶೇಷ ಸಾಧನೆ ಮಾಡಿರುವುದರಿಂದ ಈ ಪ್ರಶಸ್ತಿಯನ್ನು ನೀಡಲಾಗಿರುತ್ತದೆ.ಪ್ರಶಸ್ತಿ ಪುರಸ್ಕøತರಾದ ಕೆ.ಶ್ರೀಮತಿ ಅವರನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಶುಕ್ರವಾರ ಅಭಿನಂದಿಸಿದರು. ಈ ಸಂದರ್ಭದಲ್ಲಿ ಚಿತ್ರದುರ್ಗ ಸ್ಟೇಪಿಂಗ್ ಸ್ಟೋನ್ ಪ್ರಾಂಶುಪಾಲರಾದ ಕಾದಂಬರಿ ಪ್ರಿಯ, ಶಿಕ್ಷಕರಾದ ಸುಧಾ, ರಮ್ಯ ಇದ್ದರು.