ಕೆ.ಶಿವರಾಂ ನಿಧನಕ್ಕೆ ಶ್ರದ್ಧಾಂಜಲಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.01:  ರಾಜ್ಯದಲ್ಲೇ ಮೊದಲನೆಯ ಬಾರಿಗೆ ಕನ್ನಡದಲ್ಲಿ ಐಎಎಸ್ ಪಾಸಾ ಆದ ನಂತರ ಜಿಲ್ಲಾಧಿಕಾರಿಗಳಾಗಿ  ಸಮಾಜ ಕಲ್ಯಾಣ ಇಲಾಖೆ ಆಯುಕ್ತರಾಗಿ, ಸಿನಿಮಾ ನಟರಾಗಿ ಹಾಗೂ ರಾಜಕಾರಣದಲ್ಲಿ ಭಾಗವಹಿಸಿಕೊಂಡಿದ್ದು ಛಲವಾದಿ ಮಹಾಸಭಾದ ಸಂಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರಾಗಿ ಅತಿ ಎತ್ತರಕ್ಕೆ ಸಮಾಜವನ್ನು ತೆಗೆದುಕೊಂಡು ಹೋಗಿದ್ದಲ್ಲದೆ ಸಮಾಜದ ಬಗ್ಗೆ ಹಗಲಿರುಳು ಚಿಂತನೆ ಮಾಡಿದ ನಾಯಕರಾದ ಕೆ ಶಿವರಾಂ ಸಾಹೇಬರ ಆತ್ಮಕ್ಕೆ ಶಾಂತಿ ಸಿಗಲೆಂದು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ವತಿಯಿಂದ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿತು.
ನಗರದ ಛಲವಾದಿ ಕಾಲೋನಿಯಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಜಯರಾಮ ಛಲವಾದಿ ಮುಖಂಡರು ಸಿ ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಧ್ಯಕ್ಷರು ಕೆ ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ  ಕಾರ್ಯದರ್ಶಿ ಶೇಷಪ್ಪ ಜಿಲ್ಲಾ ಖಜಾಂಚಿ ರಾಜು ಛಲವಾದಿ ಓಬಳೇಶ ಉಮೇಶ ಮೇಸ್ತ್ರಿ ಛಲವಾದಿ ಮಂಜುನಾಥ್ ಫೋಟೋ ಸ್ಟುಡಿಯೋ ಶೇಖರ್ ಹಾಗೂ ಇನ್ನಿತರರು ಭಾಗವಹಿಸಿದ್ದರು