ಕೆ.ಶಿವನಗೌಡ ನಾಯಕ ರವರ ಮಾತ್ರೋಶ್ರೀ ಮಹಾದೇವಮ್ಮ ನಾಯಕ ರವರಿಗೆ ಸನ್ಮಾನ

ಅರಕೇರಾ.ಸೆ.೧೨-ಭಾರತ ಸರಕಾರದ ನಿರ್ದೇಶನದಂತೆ ಕೇಂದ್ರ ಸರಕಾರ ವಿವಿಧ ಯೋಜನೆಗಳ ಅಭಿವೃದ್ದಿ ಹಾಗೂ ಪ್ರಗತಿ ಪರಿಶೀಲನೆಗಾಗಿ ರಾಯಚೂರು ಹಾಗೂ ಕೊಪ್ಪಳ ಜಿಲ್ಲಾ ಸಂಸದರ ಸಹ ಅಧ್ಯಕ್ಷತೆಯಲ್ಲಿ ಜಿಲ್ಲಾಯ ಶಾಸಕರು ವಿಧಾನ ಪರೀಷತ್ ಸದ್ಯಸರು ಜಿಲ್ಲಾ ಪಂಚಾಯತಿ,ತಾಲ್ಲೂಕಾ ಪಂಚಾಯತಿ ಅಧ್ಯಕ್ಷರು ಒಳಗೊಂಡಂತೆ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಸಾವಿತ್ರಿ ಗಂಡ ನಾಗರಾಜ ನಾಯಕ ಕರ್ನಾಳ ಅರಕೇರಾ ಇವರು ಆಯ್ಕೆಯಾಗಿದ್ದಾರೆ.
ಇಂದು ಶಾಸಕ ಕೆ.ಶಿವನಗೌಡನಾಯಕರವರ ನಿವಾಸದಲ್ಲಿ ಅವರ ಮಾತ್ರೋಶ್ರೀ ಮಹಾದೇವಮ್ಮ ನಾಯಕ ಇವರನ್ನು ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಸಾವಿತ್ರಿ ನಾಗರಾಜ ನಾಯಕ ಕರ್ನಾಳ ಇವರು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಕೆ.ಶಿವನಗೌಡನಾಯಕ,ಕೆ.ಅನಂತರಾಜ ನಾಯಕ ಇವರನ್ನು ಸನ್ಮಾನಿಸಿಗೌರವಿಸಿದರು.