ಕೆ.ಶಿವನಗೌಡ ನಾಯಕ ಬೇನಾಮಿ ಆಸ್ತಿಗಳ ವಿರುದ್ದ ಲೋಕಾಯುಕ್ತಕ್ಕೆ ದೂರು

ರಾಯಚೂರು,ಮಾ.೨೩ – ರಾಜ್ಯ ಬಿಜೆಪಿ ಸರಕಾರ ೪೦% ಪಡೆಯುತ್ತಿದ್ದರೆ ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ೧೦೦ ಕ್ಕೆ ನೂರರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದು ಅವರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ ಎಂದು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ದೇಶದ ಪ್ರಧಾನಿ ತಿನ್ನಲ್ಲ ತಿನ್ನಲು ಬಿಡಲ್ಲ ಎನ್ನುತ್ತಲೆ ದೇಶವನ್ನು ಆದಾನಿ ಅಡಿಗೆ ಇಟ್ಟಿರುವುದನ್ನು ದೇಶದ ಜನತೆ ಗಮಿನಿಸಿದೆ.ದೇವದುರ್ಗದಲ್ಲಿ ಭ್ರಷ್ಟತೆಗೆ ಹೆಸರಾಗಿರುವ ಶಾಸಕ ಕೆ.ಶಿವನಗೌಡ ನಾಯಕ ಬೇನಾಮಿ ಹೆಸರಿನಲ್ಲಿ ಅನೇಕ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಹೇಳಿದ ಅವರು ಈ ರೀತಿಯಲ್ಲಿ ಮಾಹಿತಿ ನೀಡಿದರು.
ಸಂಗಯ್ಯ ಮುತ್ಯಾ ಶುಗರ್ಸ್ ಲಿಮಿಟೆಡ್, ಶ್ರೀ ಶಿವಲಿಂಗ ಶುಗರ್ಸ್ ಲಿಮಿಟೆಡ್, ನಿಲಾವಂಜಿ, ರಂಜಿತಾ ಕನ್ಸಟ್ರಕ್ಷನ್, ಲಕ್ಷ್ಮೀ ರಂಜಿತಾ ಶುಗರ್ಸ್ ಲಿಮಿಟೆಡ್ ಇವು ಬೇರೆಯವರ ಹೆಸರಿನಲ್ಲಿರುವ ಕೆ.ಶಿವನಗೌಡ ನಾಯಕ ಅವರ ಹೆಸರಿನಲ್ಲಿರುವ ಬೇನಾಮಿ ಕಂಪೆನಿ ಹಾಗೂ ಆಸ್ತಿಗಳು ಆರೋಪಿಸಿದರು.
ಹೊಸೂರಿನ ೧/೧ ಸರ್ವೆ ನಂ. ೭-೧೨ ಎಕರೆ, ಸರ್ವೆ ನಂ. ೧/೩ ರಲ್ಲಿ ೭-೧೩ ಎಕರೆ, ಸರ್ವೆ ನಂ.೫/೧ ರಲ್ಲಿ ೩ ಎಕರೆ, ಸರ್ವೆ ನಂ.೬/೧ ರಲ್ಲಿ ೫-೩೨ ಎಕರೆ ಭೂಮಿ ಹಾಗೂ ರಾಯಚೂರಿನ ಸರ್ವೆ ನಂ. ೯೨೯ ರಲ್ಲಿ ೧೫-೦೯ ಎಕರೆ ಭೂಮಿ ಬೇನಾಮಿ ಹೆಸರಿನಲ್ಲಿವೆ. ಮೆ|| ರಂಜಿತಾ ಹೊಟೇಲ್ಸ್ ಪೈ .ಲಿ. ಮೇ|| ಸಂತೋಷಿ ಸರೋವರ ಹೊಟೇಲ್ಸ್, ಐ.ಡಿ.ಎಸ್.ಎಂ.ಟಿ ಲೇಔಟ್‌ನಲ್ಲಿ ಮನೆ ಖರೀದಿ, ಬೆಂಗಳೂರಿನಲ್ಲಿ ಮೈಕೋ ಲೇಔಟ್ ಮನೆ ಖರೀದಿ, ನಿಜಲಿಂಗಪ್ಪ ಕಾಲೋನಿಯಲ್ಲಿರುವ ಅಪಾರ್ಟ್ಮೆಂಟ್ ಖರೀದಿ, ಭೂಮನಗೊಂಡ ಗ್ರಾಮದಲ್ಲಿ ತಾಯಿ ಮಹಾದೇವಮ್ಮನ ಹೆಸರಿನಲ್ಲಿ ೬೦ ಎಕರೆ ಜಮೀನು ಖರೀದಿ, ಕೆ.ಹನುಮಂತರಾಯ ನಗರ ೩೭ ಎಕರೆ ಸರ್ಕಾರಿ ಭೂಮಿ ಸ್ವಾಧೀನ, ನೀಲವಂಜಿ ಗ್ರಾಮದಲ್ಲಿ ೨೫೦ ಎಕರೆ ದೇವೇಂದ್ರ ಹೆಸರಿನಲ್ಲಿ (ಸೋದರ ಮಾವ), ಸಿರವಾರ ಗ್ರಾಮದಲ್ಲಿ ೮೦ ಎಕರೆ ( ಪೆಟ್ರೋಲ್ ಬಂಕ್) ಮಾವ ವೆಂಕಟೇಶ ಪೂಜಾರಿ ಈಗ ಹೆಂಡತಿ ವಿಜಯಲಕ್ಷ್ಮೀ, ಜೇವರ್ಗಿ ಗಡ್ಡಿ ಸಂಗಯ್ಯ ಗ್ರಾಮದಲ್ಲಿ ೩೦೦ ಎಕರೆ ದೊಡ್ಡನಗೌಡ ನರಿಬೋಳ ಹೆಸರಿನಲ್ಲಿ, ಸಿರವಾರ ಕ್ರಾಸ್ ಹತ್ತಿರ ೧೮ ಎಕರೆ ಮೇನ್ ರಸ್ತೆಗೆ ಹೊಂದಿಕೊಂಡಂತೆ, ಕೊಪ್ಪರ ಸ್ಟೇಡಿಯಂಗೆ ಮೀಸಲಿಟ್ಟ ಜಾಗದ ಪಕ್ಕದಲ್ಲಿ ೧೦೦ ಎಕರೆ ಜಾಗ ಖರೀದಿ, ತಿಂಥಣಿ ಬ್ರಿಡ್ಜ್ ಬಳಿ ೪೦ ಎಕರೆ ,ದೇವದುರ್ಗದಲ್ಲಿ ೧೭ ವೈನ್ ಶಾಪ್ ಗಳು, ಹತ್ತಿಗೂಡೂರು ಬಳಿ ಬಾರ್, ಗಂಗಾವತಿಯಲ್ಲಿ ೨೭ ಬಾರ್‌ಗಳ ಖರೀದಿ ಮುಲ್ಲಾಪೂರನಲ್ಲಿ ಜಲ್ಲಿ ಕ್ರಸರ್, ಇಲಕಲ್‌ನಲ್ಲಿ ಗ್ರಾನೈಟ್ ನಿಂಗ್ ಹೀಗೆ ಅವರ ಅಕ್ರಮ ಆಸ್ತಿಗಳೆಂದು ಮಾಹಿತಿ ನೀಡಿದರು.
ಇಂತಹ ಭ್ರಷ್ಟ ಶಾಸಕನನ್ನು ದೇವದುರ್ಗ ಜನತೆ ಮುಂಬರುವ ಚುನಾವಣೆಯಲ್ಲಿ ಕಿತ್ತೆಸೆಯಲು ತೀರ್ಮಾನಿಸಿದ್ದಾರೆ ಎಂದು ಹೇಳಿದ ಅವರು, ರಾಜ್ಯದಲ್ಲಿ ನಡೆಯತ್ತಿರುವ ಭ್ರಷ್ಟಾಚಾರದ ಬಗ್ಗೆ ಹಲವರು ಹಲವು ಮಾಹಿತಿ ನೀಡಿದಾಗ್ಯೂ ಪ್ರಧಾನಿ ನರೇಂದ್ರ ಮೋದಿ ತನಿಖೆ ಹಾಗೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಕಿಡಿ ಕಾರಿದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ, ರಾಜ್ಯ ವಕ್ತಾರ ಶಿವಶಂಕರ ವಕೀಲ, ಜಿಲ್ಲಾ ಗೌರವಾಧ್ಯಕ್ಷ ಯೂನೂಸ್ ಖಾನ್. ಎಸ್.ಸಿ ಘಟಕದ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ, ನರಸಿಂಹಲು ಸೇರಿದಂತೆ ಇತರರು ಉಪಸ್ಥಿತರಿದ್ದರು.