ಕೆ.ಶಿವನಗೌಡ ನಾಯಕ ಅಭಿಮಾನಿ ಬಳಗದಿಂದ ಮಾಸ್ಕ್ ವಿತರಣೆ

ಮಾನ್ವಿ.ನ.೦೯-ಕೆ.ಶಿವನಗೌಡ ನಾಯಕ್ ಅಭಿಮಾನಿ ಬಳಗದ ವತಿಯಿಂದ ಇಂದು ಪೋತ್ನಾಳ್ ಗ್ರಾಮದಲ್ಲಿ ಮನೆ ಮನೆಗೆ ೬ ಸಾವಿರ ಮಾಸ್ಕ ವಿತರಣೆ ಮಾಡಲಾಯಿತು ಎಂದು ಬಿಜೆಪಿ ಯುವ ಮುಖಂಡರಾದ ಕೆ.ನಾಗಲಿಂಗಸ್ವಾಮಿ ಹೇಳಿದರು.
ತಾಲೂಕಿನ ಸಮೀಪದ ಪೋತ್ನಾಳ ಗ್ರಾಮದಲ್ಲಿ ಬೆಳಿಗ್ಗೆ ಪ್ರಸಿದ್ಧ ಶ್ರೀ ಹುಚ್ಚಬುಡ್ಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮಾಸ್ಕ್ ವಿತರಣೆ ಆರಂಭಿಸಲಾಯಿತು.
ಮಾಸ್ಕ ವಿತರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಯುವ ಮುಖಂಡರಾದ ಕೆ. ನಾಗಲಿಂಗಸ್ವಾಮಿ ರವರು ಕೆ.ಶಿವನಗೌಡ ನಾಯಕರು ಕೋವಿಡ್-೧೯ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಮನೆ ಮನೆಗೆ ಉಚಿತ ಮಾಸ್ಕ್ ಹಂಚಿಕೆ, ಅನ್ನ ದಾಸೋಹ, ವಿವಿಧ ಕ್ಷೇತ್ರದ ಬಡವರಿಗೆ ಆಹಾರ ಕಿಟ್ ಸೇರಿದಂತೆ ಅನೇಕ ಜನ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ತಿಮ್ಮಾರೆಡ್ಡಿಗೌಡ ಭೋಗಾವತಿ, ವೀರೇಶ ನಾಯಕ ಬೆಟ್ಟದೂರು, ಎಂ.ಮಲ್ಲಿಕಾರ್ಜುನಗೌಡ, ನವೀನ್ ನಾಡಗೌಡ, ಕೆ.ನಾಗಲಿಂಗಸ್ವಾಮಿ, ಮೌಲಾಸಾಬ್ ಗಣದಿನ್ನಿ, ಬಸ್ಸಪ್ಪಗೌಡ, ರಮೇಶ ನಾಯಕ ಉಟಕನೂರು, ಮಹೇಶಗೌಡ, ಲಿಂಗಣ್ಣ, ಬುಜ್ಜಿ, ಗುಂಡಪ್ಪ ರಾಚೋಟಿ, ಕರಿವೀರಯ್ಯ ಸ್ವಾಮಿ, ಮಲ್ಲನಗೌಡ, ಪ್ರಕಾಶ ದೋತರಬಂಡಿ, ರವಿ ಜೀನೂರು, ಈಶ್ವರ, ಗಾದಿಲಿಂಗಪ್ಪ ಪ್ರಕಾಶ ತಡಕಲ್, ರಾಮಕೃಷ್ಣ, ಸಿದ್ಧಾರ್ಥ ಸಂಕನೂರು ಸೇರಿದಂತೆ ಅನೇಕರು ಇದ್ದರು.