ಕೆ.ಶಿವನಗೌಡ ನಾಯಕ್ ಹುಟ್ಟು ಹಬ್ಬದಂಗವಾಗಿ ಸಿಹಿ ಹಂಚಿಕೆ

ಮಾನ್ವಿ,ಜು.೧೫-
ಮಾಜಿಸಚಿವ ಹಾಗೂ ಅಭಿವೃದ್ಧಿ ಹರಿಕಾರ ಕೆ.ಶಿವನಗೌಡನಾಯಕರ ೪೬ ನೇ ಹುಟ್ಡು ಹಬ್ಬದಂಗವಾಗಿ ಮಾನ್ವಿ ಪಟ್ಟಣದ ಬಸವವೃತ್ತದ ಬಳಿ ತಾಲೂಕ ಪಂಚಾಯತ ಮಾಜಿ ಸದಸ್ಯ ಶಾಂತಪ್ಪ ಕಪಗಲ್ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿಯನ್ನು ಹಂಚಿದರು.
ಈ ವೇಳೆ ಮಾತನಾಡಿದ ಶಾಂತಪ್ಪ ಕಪಗಲ್ ಅವರು ಮಾಜಿ ಸಚಿವ ಹಾಗೂ ಅಭಿವೃದ್ಧಿ ಹರಿಕಾರ ಕೆ.ಶಿವನಗೌಡನಾಯಕರು ಶಾಸಕರಾಗಿ ಮತ್ತು ಸಚಿವರಾಗಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಜೊತೆಗೆ ಕೋವಿಡ್-೧೯ ಸಂಧರ್ಬದಲ್ಲಿ ಅನ್ನಸಂತರ್ಪಣೆ, ಆಹಾರ ಕಿಟ್ ವಿತರಣೆ ಸೇರಿದಂತೆ ಅನೇಕ ರೀತಿಯಲ್ಲಿ ಜನೋಪಕಾರಿ ಸೇವೆಯನ್ನು ಮಾಡಿರುವುದನ್ನು ಮಾನ್ವಿ,ಸಿರವಾರ ತಾಲೂಕಿನ ಜನತೆ ಎಂದಿಗೂ ಮರೆಯುವುದಿಲ್ಲ ಎಂದರು.
ಕೆ.ಶಿವನಗೌಡನಾಯಕರು ನೂರಾರು ವರ್ಷ ಬಾಳಲಿ ದೇವರು ಇವರಿಗೆ ಆಯುಷ್ಯ ಆರೋಗ್ಯ ಸುಖ ಸಮೃದ್ಧಿಯನ್ನು ನೀಡಲಿ ಎಂದು ಪ್ರಾರ್ಥಿಸಿದ ಶಾಂತಪ್ಪ ಕಪಗಲ್ ಅವರು ಮುಂದಿನ ದಿನಗಳಲ್ಲಿ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಲು ದೇವರು ಶಕ್ತಿಯನ್ನು ದಯಪಾಲಿಸಲಿ ಎಂದು ಆಶಿಸಿದರು.
ಈ ವೇಳೆ ಮುಖಂಡರಾದ ಲಕ್ಷ್ಮಣನಾಯಕ ಕುರ್ಡಿ, ಅಬ್ರಾಹಂಪ್ಪ ಕುರ್ಡಿ, ಮಲ್ಲೇಶನಾಯಕ, ಸೈಯದ್ ಮುನ್ನಾಸಾಬ್, ಸಂದೀಪ್, ಸುನೀಲ್, ನರಸಪ್ಪ, ಶಾಂತಪ್ಪ ಕುರ್ಡಿ, ಸುಧಾಕರ, ವೀರಾರೆಡ್ಡಿನಾಯಕ, ಅಮರೇಶನಾಯಕ, ಸಂಜಯ, ನರಸಿಂಹ ಸೇರಿದಂತೆ ಅನೇಕರಿದ್ದರು.