ಅರಕೇರಾ,ಜು.೧೫-
ಪಟ್ಟಣದಲ್ಲಿ ಮಾಜಿ ಸಚಿವ ಕೆ.ಶಿವನಗೌಡ ನಾಯಕರವರ ೪೬ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಕೆ.ಎಸ್.ಎನ್ ಅಭಿಮಾನಿ ಬಳಗದವರು ಸ್ಥಳೀಯ ಭಾಗ್ಯವಂತಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಮಾಡಿದರು.
ಪ್ರಮುಖರಾದ ಕೆ.ಅನಂತರಾಜ ನಾಯಕ, ಮಲ್ಲಿಕಾರ್ಜುನಯ್ಯ ಸ್ವಾಮಿ ಹಿರೇಮಠ, ಹನುಮಂತ್ರಾಯ ನಾಯಕ ಪೋ.ಪಾ, ಪ್ರಥಮ ದರ್ಜೆ ಗುತ್ತೆದಾರ ಸೀತಣ್ಣ ನಾಯಕ ಗುರಿಕೇರಾ, ಜಿಪಂ ಮಾಜಿ ಸದಸ್ಯ ಡಾ.ಎಚ್.ಎ ನಾಡಗೌಡ, ಬೂದೆಪ್ಪ ಸಾಹುಕಾರ, ಸಿದ್ದಪ್ಪ ಪೈಕಾರ, ಜಾವ್ಹೀದ್ ಚಿಂಚೋಳಿಕರ್, ವೆಂಕೋಬ ನಾಯಕ ಬಿಚ್ಚದ, ಶೇಖರಪ್ಪ ಗೌಡ ಮಾ.ಪಾ, ಯುವ ಮುಖಂಡರಾದ ಭಗವಂತ್ರಾಯ ನಾಯಕ, ವಿರೇಶ ನಾಯಕ, ರವಿ ನಾಯಕ ಸೇರಿದಂತೆ ಅಪಾರ ಅಭಿಮಾನಿಗಳು ಇದ್ದರು.