ಕೆ.ಶಿವನಗೌಡ ನಾಯಕರಿಗೆ ಕಾರ್ಯಕರ್ತರಿಂದ ಭವ್ಯ ಸ್ವಾಗತ

ಅರಕೇರಾ,ಏ.೧೩- ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಶಿವನಗೌಡ ನಾಯಕ ಅವರು ಇಂದು ಕ್ಷೇತ್ರದ ಬಿ.ಗಣೇಕಲ್ ಗ್ರಾಮಕ್ಕೆ ಆಗಮಿಸಿದ್ದು, ಅವರನ್ನು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಅವರಿಂದು ನಾಮಪತ್ರಸಲ್ಲಿಸುವ ನಿಮಿತ್ಯವಾಗಿ ಕ್ಷೇತ್ರದ ಬಿ.ಗಣೇಕಲ್ ಗ್ರಾಮಕ್ಕೆ ಬೇಟೆ ನೀಡಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅವರು ಹಲವಾರು ಗ್ರಾಮಗಳ ಪ್ರವಾಸ ಕೈಗೊಂಡಿರುವ ನಾನು ಜನರ ಅಭೂತಪೂರ್ವ ಬೆಂಬಲ ಮತ್ತು ಪ್ರೀತಿಯನ್ನು ಪಡೆದಿದ್ದೇನೆ ಅದು ನನಗೆ ಸಿಕ್ಕಿರುವ ದೊಡ್ಡ ಆಸ್ತಿಯಾಗಿದೆ ಎಂದರು.
ಇದೇ ವೇಳೆ ನೆರೆದಿದ್ದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ತಿಳಿಸುವವುದರೊಂದಿಗೆ ನಿಮ್ಮ ಪ್ರೀತಿ, ಬೆಂಬಲ, ಆಶೀರ್ವಾದ ಸದಾ ಹೀಗೆ ಇರಲಿ ಎಂದರು. ಇದೇ ವೇಳೆ ಗ್ರಾಮಸ್ಥರು ಮೆರವಣಿಗೆಯೊಂದಿಗೆ ಹೂಮಳೆ ಗೈಯುವ ಮೂಲಕ ಅದ್ಧೂರಿ ಮೆರವಣಿಗೆಯೊಂದಿಗೆ ಗ್ರಾಮಕ್ಕೆ ಸ್ವಾಗತಿಸಿದರು.
ಪಕ್ಷ ಸೇರ್ಪಡೆ ಕಾರ್ಯಕ್ರಮ ಇದೇ ವೇಳೆ ಗಾಜಲದಿನ್ನಿ ಗ್ರಾಮದ ೫೦ಕ್ಕೂ ಹೆಚ್ಚು ಕಾರ್ಯಕರ್ತರು ಶಾಸಕರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಹಾಗೂ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಜೆಡಿಎಸ್ ಪಕ್ಷ ತೊರೆದು ಮುಂಡರಗಿ ಶಿವಣ್ಣ ತಾತ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.