ಕೆ.ಶಿವನಗೌಡನಾಯಕ ಅಪಾರ ಅಭಿಮಾನಿಗಳು.ಬೆಂಬಲಿಗರು ನಾಮಪತ್ರ ಸಲ್ಲಿಸಲು ಸಾಕ್ಷಿ

ಅರಕೇರಾ.ಏ.೧೭- ಅರಕೇರಾ ದೇವದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಶಾಸಕ ಕೆ.ಶಿವನಗೌಡನಾಯಕ ಇಂದು ನಾಮಪತ್ರ ಸಲ್ಲಿಸಲು ಅಭಿಮಾನಿಗಳು ಬಿಜೆಪಿ ಕಾರ್ಯಕರ್ತರು ಅದ್ದೂರಿಯಾಗಿ ಪಟ್ಟಣದಲ್ಲಿ ಡೋಳ್ಳು ಬಾಜಿಬಜಂತ್ರಿಯೊಂದಿಗೆ ಅಭಿಮಾನಿಗಳು ಬಿಜೆಪಿ ಪಕ್ಷದ ಧ್ವಜ ಹಿಡಿದು ಕೊಂಡು ತಂಡೋಪಾಯ ತಂಡದೋಂದಿಗೆ ಕಂಡುಬಂದರು.
ಕೆ.ಶಿವನಗೌಡನಾಯಕರವರಗ್ರಾಮದಲ್ಲಿರುವ ಶ್ರೀಸೂಗೂರೇಶ್ವರದೇವಸ್ಥಾನ.ಶ್ರೀಅಂಜನೇಯ್ಯದೇವಸ್ಥಾನ ಶ್ರೀಭಾಗಮ್ಮದೇವಿದೇವಸ್ಥಾನ ಶ್ರೀಮಾರೇಮ್ಮದೇವಿ ದೇವಸ್ಥಾನ ಸೇರಿದಂತೆ ಗ್ರಾಮದಲ್ಲಿ ದೇವಸ್ಥಾನಕ್ಕೆ ತೇರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆಗೈದರು.
ಅರಕೇರಾ ಪಟ್ಟಣದ ಸುತ್ತಮುತ್ತಲ್ಲಿನ ಗ್ರಾಮಸ್ಥರು ಸಹಸ್ರಾರು ಕಾರ್ಯಕರ್ತ ರೊಂದಿಗೆ ಡೊಳ್ಳು ಬಾಜಿಗಳೊಂದಿಗೆ ಕಾರ್ಯ ಕರ್ತರು ವಾಹನಗಳು.ಮೋಟಾರು ಸೈಕಲ್ ವಾಹನದೊಂದಿಗೆ ದೇವದುರ್ಗಕ್ಕೆ ತಮ್ಮನೆಚ್ಚಿನ ನಾಯಕರು ನಾಮಪತ್ರ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಸಾಕ್ಷಿಯಾದರು.