
ರಾಯಚೂರು,ಏ.೦೩- ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರು ಬಿ.ವಿ. ನಾಯಕ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್, ಕೆಪಿಸಿಸಿ ಸದಸ್ಯರು ಪರಸ್ಮಲ್ ಸುಖಾಣಿ, ರಾಯಚೂರು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆ. ಶಾಂತಪ್ಪಣ್ಣ ಶಾಸಕರಾದ ಬಸನಗೌಡ ದದ್ದಲ್, ಜಯಂತರಾವ ಪತಂಗಿ ಆರ್‌ಎಪಿಎಮ್‌ಸಿ ಅಧ್ಯಕ್ಷರು, ಜಿ. ಬಸವರಾಜ ರೆಡ್ಡಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ತಾಯಣ್ಣನಾಯಕ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಕೆ. ಪಂಪಾಪತಿ ದೇವಸೂಗುರ ಬ್ಲಾಕ್ ಅಧ್ಯಕ್ಷರು, ರಾಜಶೇಖರ ರಂಗ, ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಸಿದ್ದಪ್ಪ ಭಂಡಾರಿ ಮಾಜಿ ನಿರ್ದೇಶಕರು, ಬೆವಿನ್ ಬೂದೆಪ್ಪ, ಸಂಗಮೇಶ ಭಂಡಾರಿ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು, ಮಲ್ಲಯ್ಯ ಮ್ಯಾತ್ರಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ಮತ್ತು ಜಿಲ್ಲಾ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಮತ್ತು ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಶಾಸಕರಾದ ಬಸನಗೌಡ ದದ್ದಲ್‌ರವರ ಅಭಿವೃದ್ಧಿ ಕಾರ್ಯಗಳು, ಅವರ ಸರಳತೆ ಮೆಚ್ಚಿ ಕಲ್ಮಲಾ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ. ಶರಣಪ್ಪ, ಮತ್ತು ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಸವರಾಜ ನೆಲ್ಲಾಳರವರು ತಮ್ಮ ಅಪಾರವಾದ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ನಾಗೇಂದ್ರಪ್ಪ ಮಟಮಾರಿ, ಬಸವರಾಜ ವಕೀಲ, ಹನುಮಂತಪ್ಪ ಜಾಲಿಬೆಂಚಿ ಶ್ರೀನಿವಾಸ ಗ್ಯಾಸ್, ರಾಮನಗೌಡ, ನಾರಾಯಣ, ವೆಂಕಟೇಶ ನಾಯಕ, ಬಶೀರ್, ಅಶೋಕ್, ರಾಮು ಸಿಂಗ ನೋಡಿ ಕರಿಯಪ್ಪ ನಾಯಕ, ಅಜ್ಮಿರ್ ಸಾಬ್, ಕೊಂಬಿನ್ ಆಂಜನೇಯ್ಯ, ಬಸವರಾಜ ಮನ್ಸಲಾಪೂರ, ಮಂಜುನಾಥ, ದೇವಸೂಗೂರು ಬ್ಲಾಕ್ ಕಾಂಗ್ರೆಸ್‌ನ ಸರ್ವ ಸದಸ್ಯರುಗಳು
ಮತ್ತು ಪಕ್ಷದ ಮುಖಂಡರುಗಳು, ಉಪಸ್ಥಿತರಿದ್ದರು.