ಕೆ.ವಿ.ಕೆಯಲ್ಲಿ ರಾಜ್ಯ ಮಟ್ಟದ ಕವಿಗೋಷ್ಟಿ ಸಂಪನ್ನ

ಬೀದರ:ಡಿ.25: ಜನವಾಡ ರಸ್ತೆಯಲ್ಲಿರುವ ಐಸಿಎಆರ್ ಕೇಂದ್ರದಲ್ಲಿ ಇತ್ತಿಚೀಗೆ ರಾಜ್ಯ ಮಟ್ಟದ ಕವಿಗೋಷ್ಠಿ ನೆರವೇರಿತು.

ಜಂಟಿ ಕೈಷಿ ನಿರ್ದೇಶಕಿ ತಾರಮಣಿ ಜಿ ಹೆಚ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೈಷಿಕರೊಂದಿಗೆ ಸಾಹಿತ್ಯ ಬೆರೆಸಿ, ಕೃಷಿ ಸಮಾಜದ ಧ್ವನಿಯಾಗಿ ಕಾವ್ಯ ವಾಚನ ಮಾಡುವುದು ಅಗತ್ಯವೆಂದು ಪ್ರತಿಪಾದಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಇಡಿ ನಾಡಿಗೆ ಸಿಮಿತವಾಗಿದ್ದು, ರೈತರ ನ್ಯಾಯದ ಧ್ವನಿಯಾಗಿದೆ ಎಂದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ|| ಸುನಿಲಕುಮಾರ ಎನ್ ಎಮ್ ಕೈಷಿಕರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಡಾ. ರಾಮಚಂದ್ರ ಗಣಾಪೂರ, ಡಾ. ಲಕ್ಷ್ಮೀ ಬಾಲಗೊನುಮಠ, ಶಿವಲೀಲಾ ಮಠ ಡಾ. ಶೈಲಜಾ ಹುಡಗಿ, ಡಾ. ಸುಜಾತಾ ಹೊಸಮನಿ, ಎಮ್ ಆರ ಶ್ರೀಕಾಂತ, ಪ್ರಮೊದ ಪಾಂಚಾಳ, ರವಿ ಬಿರಾದರ ವಿಜಯಕುಮಾರ ಗೌರೆ, ರವಿ ರಾಯಚುರು, ಶಂಕರ ಬಳ್ಳಾರಿ, ಶಿವರಾಜ ಎಮ್ ಮೀತ್ರ, ಸುಬ್ಬಣ್ಣ ಕರಕನಳ್ಳಿ, ಆಶಾ ರಾಜಕುಮಾರ, ಕಸ್ತೂರಿ ಪಟ್ಟಪಳ್ಳಿ ಕಾವ್ಯ ನಂದಿನಿ ಕುಸುಮಾ ಹಕ್ಯಾಳ, ಮಲ್ಲೇಶ್ವರಿ ಗಂಧಿಗುಡಿ, ಡಾ. ಶ್ರೇಯಾ ಮಹೇಂದ್ರಕರ, ಸುನಿತಾ ಪಾಟೀಲ್, ರೇಖಾ ಆರ್ ಲಕಶೇಟ್ಟಿ, ದಯಾಸಾಗರ, ಓಂಕಾರ ಪಾಟೀಲ್ ವಿದ್ಯಾವತಿ ಬಲ್ಲೂರು, ಕಾವ್ಯ ನಂದಿನಿ ಮುಂತಾದವರು ಕವಿತೆಗಳನ್ನು ವಾಚನ ಮಾಡಿದರು.

ಅಧ್ಯಕ್ಷತೆ ವಹಿಸಿದ ಸಾಹಿತಿ ಪಾರ್ವತಿ ವಿ ಸೋನಾರೆ ಮಾತನಾಡಿ, ಕಲ್ಯಾಣ ನಾಡಿನಲ್ಲಿ ಕವಿಗಳು ರೈತರ ಧ್ವನಿಯಾಗಿ ತಮ್ಮ ಕವಿತೆಗಳನ್ನು ವಾಚನ ಮಾಡಿದ್ದಾರೆ. ರಾಜ್ಯದಲ್ಲಿ ಬೀದರ ಜಿಲ್ಲೆ ವಿಶಿಷ್ಠವಾದ ಸಾಹಿತ್ಯ ಈ ಸಮಾರಂಭವಾಗಿತ್ತು. ಭಾಗವಹಿಸಿದ ಎಲ್ಲಾ ಕವಿಗಳು ದೇಶದ ನಾಡಿನ ಅನ್ನದಾತನಿಗೆ ಧ್ವನಿಯಾಗಿ, ತಮ್ಮ ಕವಿತೆಗಳನ್ನು ವಾಚನ ಮಾಡಿದ್ದಾರೆ ಎಂದರು.

ಪ್ರೋ|| ಜಗನಾಥ ಕಮಾಲಾಪೂರೆ ಕಾರ್ಯಕ್ರಮ ನಿರೂಪಿಸಿದರು.