ರಾಮನಗರ.ಜೂ೨:ಮಾಜಿ ಶಾಸಕ ಕೆ.ರಾಜು ೬೬ನೇ ಜನ್ಮದಿನವನ್ನು ಅವರ ಅಭಿಮಾನಿಗಳು ರಕ್ತದಾನ ಮಾಡುವ ಮೂಲಕ ಗುರುವಾರ ಆಚರಿಸಿದರು. ನಗರದ ಕೆ.ರಾಜು ಸ್ವಗೃಹದಲ್ಲಿ ಜನ್ಮದಿನ ಆಚರಿಸಿ, ಅಭಿಮಾನಿಗಳು ಶುಭ ಕೋರಿದರು.
ಶಾಸಕ ಇಕ್ಬಾಲ್ ಹುಸೇನ್ ಕೂಡ ಆಗಮಿಸಿ ಮಾಜಿ ಶಾಸಕ ಕೆ. ರಾಜುಗೆ ಶುಭ ಕೋರಿದರು. ರೋಟರಿ ಸಿಲ್ಕ್ ಸಿಟಿ, ಕೆ. ರಾಜು ಅಭಿಮಾನಿ ಬಳಗ, ಬೆಳ್ಳಿ ರಕ್ತ ನಿಧಿ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಯಿತು. ಸುಮಾರು ೫೦ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಕಾಂಗ್ರೆಸ್ ಮುಖಂಡರು, ಸಮಾಜ ಸೇವಕರು, ಅಭಿಮಾನಿಗಳು, ಹಿತೈಷಿಗಳು ಶುಭ ಹಾರೈಸಿದರು.