ಕೆ.ಯು.ಡಬ್ಲ್ಯು.ಜೆ ನೂತನ-ನವಿಕರಣ ಸದಸ್ಯತ್ವಕ್ಕೆ ಅರ್ಜಿ ಅವ್ಹಾನ

ಬೀದರ್: ಫೆ.17:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬೀದರ್ ಜಿಲ್ಲೆ ಘಟಕದಿಂದ 2024-25ನೇ ಸಾಲಿಗಾಗಿ ಹೊಸ ಹಾಗೂ ನವಿಕರಣಕ್ಕಾಗಿ ಅರ್ಜಿ ಅವ್ಹಾನಿಸಲಾಗಿದೆ.
ಹೊಸ ಸದಸ್ಯತ್ವ ಪಡೆಯುವವರು ಕಡ್ಡಾಯವಾಗಿ ಒಂದು ಮಾಧ್ಯಮದಲ್ಲಿ ಕನಿಷ್ಟ ಎರಡು ವರ್ಷಗಳ ಸೇವಾವಧಿ ಪೂರ್ಣಗೊಳಿಸಿರತಕ್ಕದ್ದು. ರಾಜಕೀಯ ಪಕ್ಷದಲ್ಲಿ, ಸಹಕಾರ ಸಂಘದಲ್ಲಿ ಹಾಗೂ ಗುತ್ತಿಗೆದಾರರ ಸಂಘದಲ್ಲಿ ಸಕ್ರಿಯ ಸದಸ್ಯತ್ವ ಪಡೆದವರಿಗೆ ಸಹ ಸದಸ್ಯತ್ವ ಮಾತ್ರ ಕೊಡಲಾಗುವುದು. ಈ ಹಿಂದೆ ಪತ್ರಿಕೆ ನಿರಂತರವಾಗಿ ಬರುತ್ತಿದ್ದು, ಇತ್ತಿಚೀಗೆ ಬಂದ್ ಆಗಿದೆ ಎಂಬ ಮಾಹಿತಿ ಸಂಘದ ಗಮನಕ್ಕೆ ಬಂದರೆ ಅಂಥವರಿಗೆ ಸದಸ್ಯತ್ವ ನೀಡಲು ಬರುವುದಿಲ್ಲ. ಮಾಧ್ಯಮ ಪಟ್ಟಿಯಲ್ಲಿರದ ಪತ್ರಿಕೆಗಳು ವಾರ್ತಾ ಇಲಾಖೆಗೆ ನಿರಂತರವಾಗಿ ಬರುತ್ತಿದೆ ಎಂಬ ವಿಷಯ ಸಂಘದ ಗಮನಕ್ಕೆ ಇದ್ದರೆ ಮಾತ್ರ ಅಂತಹ ಪತ್ರಕರ್ತರಿಗೆ ಸದಸ್ಯತ್ವ ನೀಡಲಾಗುವುದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿರೂದ್ಧ ಪರ್ಯಾಯವಾಗಿ ಬೇರೆ ಸಂಘದಲ್ಲಿ ಗುರ್ತಿಸಿಕೊಂಡವರಿಗೆ ನಮ್ಮ ಸಂಘದಲ್ಲಿ ಸದಸ್ಯತ್ವ ನೀಡಲು ಬರುವುದಿಲ್ಲ. ಸ್ಥಳಿಯ ಟಿ.ವಿ ಮಾಧ್ಯಮದಲ್ಲಿ ಕೆಲಸ ಮಾಡುವ ಪತ್ರಕರ್ತರು ವಾರ್ತಾ ಇಲಾಖೆಯ ಅನುಮತಿ ಪಡೆಯಬೇಕು.
ಮೇಲಿನ ಮಾನದಂಡ ಆಧರಿಸಿ ಈ ವರ್ಷದ ನವಿಕರಣ ಹಾಗೂ ಹೊಸ ಸದಸ್ಯತ್ವ ನೀಡಲಾಗುವುದು. ಈ ತಿಂಗಳ 22ರೊಳಗೆ ಬೀದರ್ ನಗರದಲ್ಲಿರುವ ಪತ್ರಕರ್ತರು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ:- 9448604824 ಇವರಿಗೆ ಖುದ್ದಾಗಿ ಸಂಪರ್ಕಿಸಿ, ಅರ್ಜಿ ನಮುನೆ ಪಡೆದು ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಈ ತಿಂಗಳ 22ರೊಳಗೆ ರು.510 ನಗದು ರೂಪದಲ್ಲಿ ಅಥವಾ ಡಿ.ಡಿ ಏಚಿಡಿಟಿಚಿಣಚಿಞಚಿ uಟಿioಟಿ oಜಿ Woಡಿಞiಟಿg ಎouಡಿಟಿಚಿಟisಣ ಃiಜಚಿಡಿ ಇವರ ಹೆಸರಿನಲ್ಲಿ ಸಲ್ಲಿಸತಕ್ಕದ್ದು. ನಂತರ ಬರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೆ ಸ್ವೀಕರಿಸಲಾಗುವುದಿಲ್ಲ.
25ರಂದು ಜಿಲ್ಲಾ ಕಾರ್ಯಕಾರಿ ಸಭೆ:- ಈ ತಿಂಗಳ 25ರಂದು ಭಾನುವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಡಿ.ಕೆ ಗಣಪತಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ಹಮ್ಮಿಕೊಳ್ಳಲಾಗಿದ್ದು, ಅಂದೆ ಸಂಘದ ಅನುಮೊದನೆ ಪಡೆದು ಭರ್ತಿ ಮಾಡಿದ ಎಲ್ಲ ಅರ್ಜಿಗಳನ್ನು ರಾಜ್ಯ ಸಂಘಕ್ಕೆ ಕಳುಹಿಸಲಾಗುವುದು. ಈ ವರ್ಷ ಆಯಾ ತಾಲೂಕು ಘಟಕಕ್ಕೆ ಅಲ್ಲಿಯ ಸದಸ್ಯತ್ವ ಪಡೆಯಲು ಅನುಮತಿ ನೀಡಲಾಗಿದೆ. ಎಲ್ಲ ತಾಲೂಕು ಘಟಕಗಳು ಈ ತಿಂಗಳ 23ರಂದು ಕಡ್ಡಾಯವಾಗಿ ಅಲ್ಲಿಯ ಸಂಘದ ಅನುಮೊದನೆ ಪಡೆದು ಜಿಲ್ಲಾ ಸಂಘಕ್ಕೆ ಸಲ್ಲಿಸಬೇಕಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.