ಕೆ.ಮುನಿಸ್ವಾಮಿ ಕ್ರೀಯಾ ಶೀಲ- ಉತ್ತಮ ಆಡಳಿತಗಾರ

ಸಿರವಾರ.ಮೇ೨೮- ಸರ್ಕಾರಿ ಅಧಿಕಾರಿಗಳು ಜನರ ಕಷ್ಟಗಳಿಗೆ, ಸಮಸ್ಯೆಗಳಿ ಸ್ಫಂದಿಸದೆ, ನಿರ್ಲಕ್ಷ್ಯ ಮನೋಭಾವ ತೊರುವ ಅನೇಕ ಮದ್ಯ ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿಯವರು ಕ್ರೀಯಾಶೀಲ, ಉತ್ತಮ ಆಡಳಿತಗಾರರಾಗಿದ್ದಾರೆ ಎಂದು ಕಾಂಗ್ರೆಸ್ ಯುವ ಮುಖಂಡ ಹಾಜಿ ಚೌದ್ರಿ ಹೇಳಿದರು.
ಸಿರವಾರ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ ಹುಟ್ಟುಹಬ್ಬದ ಅಂಗವಾಗಿ ಅಂಜುಮಾನ್ ಕಮಿಟಿಯಿಂದ ಶಾಲು, ಹಾರ ಹಾಕಿ ಗೌರವಿಸಿ ಕೇಕ್ ಕತ್ತರಿಸುವ ಮೂಲಕ ಸರಳವಾಗಿ ಆಚರಣೆ ಮಾಡಿ ಶುಭಾಷಯ ತಿಳಿಸಿ ಮಾತನಾಡಿದ ಅವರು ಗ್ರಾ.ಪಂಚಾಯತಿಯಿಂದ ಪಟ್ಟಣ ಪಂಚಾಯತಿತಾಗಿ ಮೇಲ್ದರ್ಜೆಗೆ ಏರಿದ ನಂತರ ಮುಖ್ಯಾಧಿಕಾರಿಯಾಗಿ ಕೆಲಸ ಮಾಡಿದವರಲ್ಲಿ ಕೆ.ಮುನಿಸ್ವಾಮಿ ಉತ್ತಮ,ಕ್ರೀಯಾಶೀಲ, ಅಭಿವೃದ್ದಿ, ದೂರದೃಷ್ಠಿಯಿಂದ ಕೆಲಸ ಮಾಡುವವರಾಗಿದ್ದಾರೆ.
ಸಭೆ, ಮಿಟಿಂಗ್ ಎಂದು ಪಂಚಾಯತಿಗೆ ಗೈರು ಆಗುವವರ ಮದ್ಯ ಇವರು ಒಂದು ದಿನವಾದರೂ ಗೈರು ಆಗಿಲ, ಮಿಟಿಂಗ್ ಇದ್ದರೂ ಮುಗಿಸಿಕೊಂಡು ಪಂಚಾಯತಿಗೆ ಆಗಮಿಸಿ ಕಾರ್ಯನಿರ್ವಹಿಸುತ್ತಾರೆ. ಯಾರೇ ಯಾವ ಸಮಯದಲಿ ಕರೆ, ಮೆಸೆಜ್ ಮಾಡಿದರೂ ಸ್ಪಂದಿಸಿ ಸಮಸ್ಯೆಗೆ ಸ್ಪಂದಿಸುತ್ತಾರೆ ಇಂತವರ ಸೇವೆ ಇನ್ನೂ ನಮ್ಮ ಪಟ್ಟಣಕ್ಕೆ ಬೇಕು. ಇವರಿಗೆ ಆರೋಗ್ಯ ಆಯುಷ್ಯ ವೃದ್ದಿಯಾಗಲಿ. ಮುನಿಸ್ವಾಮಿಯವರು ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದರು.
ನಮ್ಮ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಇವರಿಗೆ ಗೌರವ ಪೂರಕವಾಗಿ ಸನ್ಮಾನಿಸಲಾಗಿದೆ ಎಂದರು. ಅಂಜುಮಾನ್ ಕಮಿಟಿಯ ಅಧ್ಯಕ್ಷ ವಲಿಗುತ್ತೆದಾರ, ಸತ್ತರ ಸಾಬ್,ಇಬ್ರಾಹಿಂ ಎಲ್ ಐಸಿ, ಅಜ್ಮಿರ್ ಪಾಷ, ಜೆ.ಇ. ಶರಣಪ್ಪ, ಪಂಚಾಯತಿ ಸಿಬ್ಬಂದಿಗಳು ಇದ್ದರು.