ಕೆ. ಭೀಮರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ

ರಾಯಚೂರು,ನ.೩೦- ಸಂಕಲ್ಪ ಸೇವಾ ಸಂಸ್ಥೆಯ ಸಂಸ್ಥಾಪಕರಾದ ಕೆ. ಭೀಮರೆಡ್ಡಿ ಅವರಿಗೆ ಏಶಿಯಾ ವೇದಿಕ್ ಕಲ್ಟರ್ ಫೌಂಡೇಶನ್ ವತಿಯಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಕಲ್ಪ ಸೇವಾ ಸಂಸ್ಥೆಯ ಜನಪರ ಕೆಲಸ ಮತ್ತು ಜನರ ಆರೋಗ್ಯದ ದೃಷ್ಠಿಯನ್ನು ಗಮನದಲ್ಲಿ ಇಟ್ಟುಕೊಂಡು ಸಂಕಲ್ಪ ಸ್ವಸ್ಥ ಯೋಜನಾ ಎಂಬ ಆರೊಗ್ಯ ಕಾರ್ಡನ್ನು ಸುಮಾರು ೨೦೧೩ ರಲ್ಲಿ ಆರಂಭಿಸಿದ್ದರು .
ಈ ಯೋಜನೆಯು ಕಲ್ಯಾಣ-ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಕೆಲವು ಖಾಸಗಿ ಆಸ್ಪತ್ರೆಯೊಂದಿಗೆ ಹೊಂದಾಣಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ, ಜನರಿಗೆ ಉಪಯೋಗವಾದಂತ ಯೋಜನೆಯಾಗಿದೆ.
ಅವರ ಈ ಕಾರ್ಯಕ್ಕಾಗಿ ನ.೨೮ ರಂದು ತಮಿಳನಾಡಿನ ಹೊಸೂರಿನ ಖಾಸಗಿ ಹೊಟೇಲನಲ್ಲಿ ಏಶಿಯಾ ವೇದಿಕ್ ಕಲ್ಡರ್ ಫೌಂಡೇಶನ್ ತಮಿಳನಾಡು ಇವರ ಸಾರಥ್ಯದಲ್ಲಿ ಮುಖ್ಯ ಅಥಿತಿಗಳಾದ ಡಾ. ಬಿ. ಅಮಿತ್ ಕುಮಾರ್ ಅಧ್ಯಕ್ಷತೆಯಲ್ಲಿ ಕೆ. ಭೀಮರೆಡ್ಡಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ಸಂಕಲ್ಪ ಸೇವ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.