ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ  ಉಪ್ಪಾರ ಎಱ್ರಿಸ್ವಾಮಿ  ನೇಮಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.29: ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ನಗರದ  ಎಱ್ರಿಸ್ವಾಮಿ ಯು ಇವರನ್ನು ನೇಮಕ ಮಾಡಲಾಗಿದೆ.
ಕೆ.ಪಿ.ಸಿ.ಸಿ ಅಧ್ಯಕ್ಷ  ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ ಹಾಗೂ ಮಾಜಿ ಕೆ.ಪಿ.ಸಿ.ಸಿ ರಾಜ್ಯ ಕಾರ್ಯದರ್ಶಿ  ದೇವೇಂದ್ರಪ್ಪ ಕೆ. ಅವರ ಶಿಫಾರಸ್ಸಿನ ಮೇರೆಗೆ ತಕ್ಷಣದಿಂದ   ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು
ತಮಗೆ ವಹಿಸಲಾಗಿರುವ ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿರ್ವಹಿಸುತ್ತಾ, ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಹಾಗೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಳೀಯ ನಾಯಕರುಗಳ ಸಹಕಾರದೊಂದಿಗೆ ತಮಗೆ ನೀಡಲಾಗಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ.ಪಕ್ಷದ ಸಂಘಟನೆಗೆ ಹಾಗೂ ಕಾರ್ಮಿಕರ ಏಳಿಗೆಗಾಗಿ ಶ್ರಮಿಸುವಂತೆ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಅಧ್ಯಕ್ಷ ಕೆ.ಪುಟ್ಟಸ್ವಾಮಿಗೌಡ ಹೇಳಿದ್ದಾರೆ.
ತಮ್ಮ ನೇಮಕಾತಿ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಎಱ್ರಿಸ್ವಾಮಿ ಅವರು, ಮುಖ್ಯ ಮಂತ್ರಿ  ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ,  ಡಿ. ಕೆ. ಶಿವಕುಮಾರ್,  ರಾಜ್ಯ ಕೆ ಪಿ ಸಿ ಸಿ ಕಾರ್ಮಿಕ ಘಟಕದ ಅಧ್ಯಕ್ಷ ಪುಟ್ಟಸ್ವಾಮಿಗೌಡ,  ಜಿಲ್ಲಾ ಉಸ್ತುವಾರಿ ಸಚಿವ ಬಿ‌ ನಾಗೇಂದ್ರ,  ಕಾರ್ಮಿಕ ಸಚಿವ ಸಂತೋಷ ಲಾಡ್  ಹಾಗು ಕೆ ಪಿ ಸಿ ಸಿ ರಾಜ್ಯ ಕಾರ್ಯದರ್ಶಿ ದೇವೇಂದ್ರಪ್ಪ,  ಶಾಸಕರಾದ ಭರತ್ ರೆಡ್ಡಿ,   ಜಿ. ಎನ್. ಗಣೇಶ್, ಈ.ತುಕಾರಾಂ, ಬಿ.ಎಂ. ನಾಗರಾಜ್, ಮಾಜಿ ಶಾಸಕ ನಾರಾ ಸೂರ್ಯನಾರಾಯಣ ರೆಡ್ಡಿ,  ಡಿ ಸಿ ಸಿ ಅಧ್ಯಕ್ಷ ಮಹಮದ್ ರಫೀಕ್, ಮುಖಂಡ ಜೆ.ಎಸ್. ಆಂಜನೇಯಲು ಅವರ ಮಾರ್ಗದರ್ಶನದಲ್ಲಿ ಪಕ್ಷದ ಸಂವಧನೆಗೆ, ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ.