ಕೆ.ಪಿ.ಜೋಸ್ ಗೆ  ಅತ್ಯುತ್ತಮ ಕರಾಟೆ ಮಾಸ್ಟರ್ ಪ್ರಶಸ್ತಿ

ಸಂಜೆವಾಣಿ ವಾರ್ತೆ

ದಾವಣಗೆರೆ. ಜೂ.22: 7ನೇ ಡಾನ್ ಬ್ಲಾಕ್ ಬೆಲ್ಟ್, ಎಕೆಎಫ್ ತೀರ್ಪುಗಾರರು, ರಾಜ್ಯದ ಕರಾಟೆ ಮುಖ್ಯ ಬೋಧಕರು ಹಾಗೂ ಪರೀಕ್ಷಕರು, ಕರ್ನಾಟಕದ ರೆಫರಿ ಕಮೀಷನ್ ಛೇರ್ಮನ್ ಆಗಿ ಸೇವೆ ಸಲ್ಲಿಸುತ್ತಿರುವ ನಗರದ ಕೆ.ಪಿ.ಜೋಸ್ ಅವರಿಗೆ ಕರಾಟೆಯಲ್ಲಿ  ಸಲ್ಲಿಸಿದ ಅಮೋಘ ಸೇವೆಯನ್ನು ಗುರುತಿಸಿ ಇಂಟರ್ ನ್ಯಾಷನಲ್ ಫೌಂಡೇಶನ್ ಆಫ್ ಎಂಪವರ್ ಮೆಂಟ್ ವತಿಯಿಂದ ದೇಶದ ಅತ್ಯುತ್ತಮ ಕರಾಟೆ ಮಾಸ್ಟರ್ ಪ್ರಶಸ್ತಿಯನ್ನು ಇತ್ತೀಚೆಗೆ ಕೇರಳದ ತ್ರಿಸ್ಸೂರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿ ಗೌರವಿಸಲಾಯಿತು.