ಕೆ.ಪಿ.ಎಂ.ಇ ಕಾಯ್ದೆ ಪ್ರಕಾರ ನೋಂದಾಯಿಸಿಕೊಳ್ಳದೇ ವೈದ್ಯಕೀಯ ವೃತ್ತಿ ನಡೆಸುತ್ತಿರುವವರಿಗೆ ಎಚ್ಚರಿಕೆ

ವಿಜಯಪುರ, ನ.18-ಕರ್ನಾಟಕ ಪ್ರೈವೆಟ ಮೆಡಿಕಲ್ ಎಸ್ಟ್ಯಾಬ್ಲಿಶಮೆಂಟ್ ಈ ಕಾನೂನಿನ ಅಡಿಯಲ್ಲಿ ಖಾಸಗಿ ಪ್ರ್ಯಾಕ್ಟಿಸ್ ಮಾಡುತ್ತಿರುವ ಎಲ್ಲಾ ಅಲೋಪತಿ, ಆಯುರ್ವೇದಿಕ್, ಯೂನಾನಿ ಹಾಗೂ ಯೂನಾನಿ ಕ್ಲೀನಿಕ್‍ಗಳು, ಆಸ್ಪತ್ರೆಗಳು, ವೈದ್ಯಕೀಯ ಪ್ರಯೋಗಾಲಯಗಳು, ಕ್ಷ-ಕಿರಣ, ಕೆ.ಪಿ.ಎಂ.ಇ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ನೋಂದಣಿ ಮಾಡಿಸಿಕೊಳ್ಳದೇ ಖಾಸಗಿ ವೈದ್ಯಕೀಯ ವೃತ್ತಿ ನಡೆಸುತ್ತಿರುವ ಕ್ಲಿನಿಕ್‍ಗಳು, ವೈದ್ಯಕೀಯ ಪ್ರಯೋಗಾಲಯಗಳು ಕ್ಷ-ಕಿರಣ ಕೇಂದ್ರಗಳನ್ನು ನಡೆಸುವುದು ಕಾನೂನಿನ ಪ್ರಕಾರ ಅಪರಾಧ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಕಾರಣ ಕೆ.ಪಿ.ಎಂ.ಇ ಕಾಯ್ದೆ ಅಡಿ ನೊಂದಾಯಿಸಿಕೊಳ್ಳದೇ ಇರುವ ಕ್ಲೀನಿಕ್, ಆಸ್ಪತ್ರೆಗಳು, ವೈದ್ಯಕೀಯ ಪ್ರಯೋಗಾಲಯಗಳು, ಕ್ಷ-ಕಿರಣ ಕೇಂದ್ರಗಳು ಈ ನೋಟಿಸ್ ಜಾರಿಗೊಳಿಸಿದ ತಕ್ಷಣದಿಂದಲೇ ನೋಂದಾಯಿಸಿಕೊಳ್ಳಲು ಪ್ರಾರಂಭಿಸಬೇಕು. ಅನಿಧಿಕೃತವಾಗಿ ನಡೆಸುತ್ತಿರುವ ಕ್ಲಿನಿಕ್, ಆಸ್ಪತ್ರೆಗಳ ಬಗ್ಗೆ ಇಲಾಖೆ ವತಿಯಿಂದ ತಾಲೂಕಾವಾರು ಸಮೀಕ್ಷೆ, ಸರ್ವೇ ನಡೆಸಲಾಗುವುದು.
ಈ ಅವಧಿಯಲ್ಲಿ ತಮ್ಮ ಕ್ಲಿನಿಕ್, ಆಸ್ಪತ್ರೆಗಳನ್ನು, ಲ್ಯಾಬೋರಟಿಗಳನ್ನು ನೋಂದಾಯಿಸಿಕೊಳ್ಳದೇ ಖಾಸಗಿ ವೃತ್ತಿ ನಡೆಸುತ್ತಿರುವದು ಕಂಡುಬಂದಲ್ಲಿ ಅಂತಹ ವೈದ್ಯರ ಮೇಲೆ ಕೆ.ಪಿ.ಎಂ.ಇ ಕಾಯ್ದೆ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಜರುಗಿಸಲಾಗುವುದು ಕೆ.ಪಿ.ಎಂ.ಇ ಸಮಿತಿಯ ಅಧ್ಯಕ್ಷರೂ ಆದ ಅವರು ಎಚ್ಚರಿಕೆ ನೀಡಿದ್ದಾರೆ.